ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಗೆ ಮತ್ತೊಮ್ಮೆ ನಿರ್ಬಂಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ಎರಡನೇ ಬಾರಿ ತಡೆಹಿಡಿಯಲಾಗಿದೆ. ಈ ಖಾತೆಯನ್ನು ಈ ಹಿಂದೆ ಜುಲೈನಲ್ಲಿ ತಡೆಹಿಡಿಯಲಾಗಿತ್ತು ಆದರೆ ಪುನಃ ಸಕ್ರಿಯಗೊಳಿಸಲಾಗಿದೆ ಎಂದ ತಿಳಿದ ಕೂಡಲೇ ಇಂದು ಮತ್ತೆ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.

ಟ್ವಿಟ್ಟರ್ ಮಾರ್ಗಸೂಚಿಗಳ ಪ್ರಕಾರ, ನ್ಯಾಯಾಲಯದ ಆದೇಶದಂತಹ ಮಾನ್ಯ ಕಾನೂನು ಬೇಡಿಕೆಗೆ ಅನುಗುಣವಾಗಿ ಮೈಕ್ರೋಬ್ಲಾಗಿಂಗ್ ಸೈಟ್ ಈ ಕ್ರಮವನ್ನು ತೆಗೆದುಕೊಂಡಿದೆ. ಹಾಗಾಗಿ ಪ್ರಸ್ತುತ, ಪಾಕಿಸ್ತಾನ ಸರ್ಕಾರದ “@GovtofPakistan” ಟ್ವಿಟರ್ ಫೀಡ್ ಭಾರತೀಯ ಬಳಕೆದಾರರಿಗೆ ಕಾಣುವುದಿಲ್ಲ.

ಈ ಹಿಂದೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಆರು ಪಾಕಿಸ್ತಾನ ಮೂಲದ ಚಾನೆಲ್‌ಗಳು ಸೇರಿದಂತೆ 16 ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಿತ್ತು.

Screenshot of Pakistan govt's Twitter account in India

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!