12 ಜನರ ಮೇಲೆ ದಾಳಿ ಮಾಡಿದ ಪಿಟ್‌ಬುಲ್‌ ಶ್ವಾನ: ಪಂಜಾಬಿನ ಗುರುದಾಸ್‌ಪುರದಲ್ಲಿ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಿಟಬುಲ್‌ ಶ್ವಾನವೊಂದು 12 ಜನರ ಮೇಲೆ ದಾಳಿ ಮಾಡಿದ ಘಟನೆ ಪಂಜಾಬಿನ ಗುರುದಾಸ್‌ಪುರದಲ್ಲಿ ನಡೆದಿದೆ. ಐದು ಗ್ರಾಮಗಳಲ್ಲಿ 12 ಜನರ ಮೇಲೆ ಪಿಟ್‌ಬುಲ್ ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ಯಾಂಗೋ ಷಾ ಗ್ರಾಮದಿಂದ ಚುಹಾನ್ ಗ್ರಾಮದವರೆಗೆ ಸುಮಾರು 15 ಕಿ.ಮೀ.ನಷ್ಟು ದೂರ ಸಂಚರಿಸಿದ ನಾಯಿ ದಾರಿಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿಮಾಡಿದೆ. ಅಂತಿಮವಾಗಿ ನಿವೃತ್ತ ಸೈನಿಕರೊಬ್ಬರು ಆತ್ಮರಕ್ಷಣೆಗಾಗಿ ನಾಯಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ ಟ್ಯಾಂಗೋ ಶಾ ಗ್ರಾಮದ ಬಳಿ ನಾಯಿ ಮೊದಲು ಇಬ್ಬರು ಕಾರ್ಮಿಕರಿಗೆ ಕಚ್ಚಿದೆ. ಅದರ ಕೊರಳಿಗೆ ಚೈನ್ ಎಸೆದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ನಾಯಿ ತಪ್ಪಿಸಿಕೊಂಡು ಗ್ರಾಮದೊಳಗೆ ನುಗ್ಗಿತು. ತನ್ನ ನಿವಾಸದಲ್ಲಿ ಕುಳಿತಿದ್ದ 60 ವರ್ಷದ ದಿಲೀಪ್ ಕುಮಾರ್ ಮೇಲೆ ದಾಳಿ ನಡೆಸಿದೆ. ಕುಮಾರ್ ನಾಯಿಯ ಕುತ್ತಿಗೆಯನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ನಾಯಿ ಅವನನ್ನು ಕೆಲವು ಮೀಟರ್‌ಗಳಷ್ಟು ಎಳೆದೊಯ್ದಿತು, ಕುಮಾರ್‌ಗೆ ತೀವ್ರ ರಕ್ತಸ್ರಾವವಾಯಿತು. ದಿಲೀಪ್ ಕುಮಾರ್ ಸಹೋದರನ ಆತನನ್ನು ರಸ್ತೆಯಿಂದ ಗೇಟ್ ಒಳಗೆ ಎಳೆದುಕೊಂಡು ಹೋಗಿ ಆತನ ಪ್ರಾಣ ಉಳಿಸಿದ್ದಾನೆ.

ಇದರ ನಂತರ, ಪಿಟ್ಬುಲ್ ಬಲದೇವ್ ರಾಜ್ ಅವರ ಕಾಲಿಗೆ ದಾಳಿ ಮಾಡಿ ಗಾಯಗೊಳಿಸಿದೆ. ಅಲ್ಲಿಂದ ಘರೋಟಾ ರಸ್ತೆಯ ಕಡೆಗೆ ಓಡಿದ ಪಿಟ್‌ಬುಲ್ ದಾರಿಯಲ್ಲಿ ಅನೇಕ ಪ್ರಾಣಿಗಳನ್ನು ಕೊಂದು ಇಟ್ಟಿಗೆ ಗೂಡು ತಲುಪಿದೆ. ನಂತರ ಅದು ನೇಪಾಳಿ ವಾಚ್‌ಮನ್ ರಾಮನಾಥ್ ಮೇಲೆ ದಾಳಿ ಮಾಡಿದ್ದು ರಾಮನಾಥ್ ಅವರನ್ನು ಎರಡು ಬೀದಿ ನಾಯಿಗಳು ರಕ್ಷಿಸಿವೆ. ಛಾನಿ ಗ್ರಾಮಕ್ಕೆ ಓಡಿದ ಪಿಟ್‌ಬುಲ್ ಅಲ್ಲಿ ಮಲಗಿದ್ದ ಮಂಗಲ್ ಸಿಂಗ್‌ಗೆ ಕಚ್ಚಿದೆ. ಮುಂಜಾನೆ 5 ಗಂಟೆಗೆ, ಪಿಟ್‌ಬುಲ್ ಮತ್ತೊಂದು ಗ್ರಾಮವನ್ನು ತಲುಪಿ ಬೆಳಗಿನ ವಾಕಿಂಗ್ ಮಾಡುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತು.

ಪಿಟ್‌ಬುಲ್ ನಂತರ ಚುಹಾನ್ ಗ್ರಾಮದ ಕಡೆಗೆ ಓಡಿಹೋಗಿ ಮೈದಾನದಲ್ಲಿ ನಡೆಯುತ್ತಿದ್ದ ಕ್ಯಾಪ್ಟನ್ ಶಕ್ತಿ ಸಿಂಗ್ ಎಂಬ ನಿವೃತ್ತ ಸೇನಾಧಿಕಾರಿಯ ಮೇಲೆ ದಾಳಿ ಮಾಡಿ ಅವನ ಕೈಗೆ ತೀವ್ರವಾಗಿ ಗಾಯಗೊಳಿಸಿದೆ. ಸಿಂಗ್ ನಾಯಿಯನ್ನು ಅದರ ಎರಡೂ ಕಿವಿಗಳಿಂದ ಹಿಡಿದು ನಾಯಿಯ ಬಾಯಿಗೆ ಟಿಕ್ ಹಾಕಿದ್ದು ನಂತರ ಗ್ರಾಮಸ್ಥರು ಅವರ ರಕ್ಷಣೆಗೆ ಬಂದರು ಮತ್ತು ಸಿಂಗ್ ಇತರರೊಂದಿಗೆ ಸೇರಿಕೊಂಡು ನಾಯಿಯನ್ನು ಕೊಂದರು.

ಗಾಯಾಳುಗಳನ್ನು ದೀನಾನಗರ ಮತ್ತು ಗುರುದಾಸ್‌ಪುರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!