Tuesday, May 30, 2023

Latest Posts

ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್‌ ಖಾತೆಗೆ ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

‌ಪಾಕಿಸ್ತಾನ ಸರ್ಕಾರದ ಟ್ವಿಟರ್‌ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಕಾನೂನು ಬೇಡಿಕೆಯಿಂದಾಗಿ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಎನ್ನುವ ಸಂದೇಶ ತೋರುತ್ತಿದೆ.

ಟ್ವಿಟ್ಟರ್‌ ನಲ್ಲಿ @GovtofPakistan ಎನ್ನುವ ಖಾತೆಯು ಭಾರತದ ಬಳಕೆದಾರರಿಗೆ ಗೋಚರಿಸುವುದಿಲ್ಲ.

ಪಾಕಿಸ್ತಾನದ ಟ್ವಿಟರ್ ಖಾತೆಯನ್ನು ಭಾರತದಲ್ಲಿ ವೀಕ್ಷಿಸಲು ನಿರ್ಬಂಧಿಸಿರುವುದು ಇದು ಮೂರನೇ ಬಾರಿಯಾಗಿದೆ. ಈ ಹಿಂದೆ 2022ರ ಜುಲೈ ಹಾಗೂ ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ಟ್ವಿಟ್ಟರ್‌ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು.

ಟ್ವಿಟರ್‌ನ ನಿಯಮ ಪ್ರಕಾರ ನ್ಯಾಯಾಲಯದ ಆದೇಶದ ಅನ್ವಯ ಯಾರಾದರೂ ಕಾನೂನು ಬೇಡಿಕೆ ಇಟ್ಟರೆ ಖಾತೆಯನ್ನು ತಡೆಹಿಡಿಯುವ ಕ್ರಮ ತೆಗೆದುಕೊಳ್ಳಲಾಗುತ್ತದೆ.

2022ರ ಜೂನ್‌ ತಿಂಗಳಿನಲ್ಲಿ ಅಮೆರಿಕ, ಟರ್ಕಿ, ಇರಾನ್‌ ಹಾಗೂ ಈಜಿಪ್ಟ್‌ಗಳಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿ ಟ್ವಿಟರ್‌ ಖಾತೆಗೆ ನಿರ್ಬಂಧ ವಿಧಿಸಿತ್ತು.

2021ರ ಮಾಹಿತಿ ತಂತ್ರಜ್ಞಾನ ನಿಯಮದಡಿ ಇರುವ ತುರ್ತು ಅಧಿಕಾರನ್ನು ಬಳಸಿ ಟ್ವಿಟರ್‌ ಖಾತೆಯನ್ನು ತಡೆಹಿಡಿಯಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!