Monday, October 2, 2023

Latest Posts

ಜಮ್ಮು ಮತ್ತು ಕಾಶ್ಮೀರ: ಪಾಕ್ ನುಸುಳುಕೋರನ ಹೊಡೆದುರುಳಿಸಿದ ಭಾರತೀಯ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಮತ್ತು ಕಾಶ್ಮೀರದ ಸಾಂಬಾದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ನುಸುಳುಕೋರನನ್ನು ಸೈನಿಕರು ಹೊಡೆದುರುಳಿಸಿದ್ದಾರೆ. ಸಾಂಬಾ ಪ್ರದೇಶದಲ್ಲಿ ಅಕ್ರಮವಾಗಿ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಆತನನ್ನು ಹತ್ಯೆ ಮಾಡಲಾಗಿದೆ.

ಪಾಕಿಸ್ತಾನದಿಂದ ನಿರಂತರ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಲಿ ಬುಧವಾರ ತಡರಾತ್ರಿ ಐಬಿಯಲ್ಲಿ ಕೆಲವು ಚಲನವಲನಗಳನ್ನು ಯೋಧರು ಗಮನಿಸಿದ್ದಾರೆ. ಅಲ್ಲದೇ ಅಲರ್ಟ್​ ಕೂಡ ಆಗಿದ್ದರು. ಆ ವ್ಯಕ್ತಿಯ ಬಳಿ ಎಷ್ಟೇ ಪ್ರಶ್ನೆ ಮಾಡಿದರು ಉತ್ತರಿಸದೆ ಮುನ್ನುಗ್ಗುತ್ತಿದ್ದ ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಪೂಂಚ್​ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಗಾಯಗೊಂಡಿದ್ದ ಆತನಿಂದ ಎಕೆ 56 ರೈಫಲ್, ಎರಡು ಪಿಸ್ತೂಲ್, ಆರು ಗ್ರೆನೇಡ್ ಮತ್ತು 30 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!