Monday, October 2, 2023

Latest Posts

SPECIAL| ಇಂದು ವಿಶ್ವ ಹಾಲಿನ ದಿನ- ಇದರ ಮಹತ್ವ ಅರಿಯೋಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೂನ್‌ ಒಂದನ್ನು ವಿಶ್ವ ಹಾಲಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹಾಲಿನ ಮಹತ್ವ ತಿಳಿಸಲು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿಶ್ವ ಹಾಲಿನ ದಿನವನ್ನಾಗಿ ಘೋಷಿಸಿ ಇದನ್ನು ಜಾರಿಗೆ ತಂದಿದೆ. 2001ರಲ್ಲಿ ಮೊದಲ ಬಾರಿಗೆ ವಿಶ್ವ ಹಾಲು ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತೀ ವರ್ಷವೂ ಅದೇ ದಿನದಂದು ವಿಶ್ವ ಹಾಲಿನ ದಿನವನ್ನು ನಿರಂತರವಾಗಿ ಆಚರಿಸುತ್ತಾ ಬರಲಾಗುತ್ತಿದೆ.

ಹೈನೋದ್ಯಮದಿಂದಾಗಿ ಇಂದು ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಪರಿಪೂರ್ಣ ಆಹಾರವಾಗಿರುವ ಹಾಲು ಪ್ರತಿಯೊಬ್ಬರಿಗೂ ಬೇಕಾಗಿರುವಂತಹದು. ಇಡೀ ವಿಶ್ವದಲ್ಲೇ ಭಾರತ ದೇಶವು ಅತಿಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ. ಹಾಲು ಮತ್ತು ಡೈರಿ ಉತ್ಪನ್ನಗಳು ಇಂದು ದೊಡ್ಡ ಮಟ್ಟದಲ್ಲಿ ವಾಣಿಜ್ಯ ಉದ್ಯಮವಾಗಿ ಬೆಳೆದು ಬಂದಿದೆ. ಇದರಿಂದಾಗಿ ಬಹುದೊಡ್ಡ ಸಂಖ್ಯೆಯ ಜನತೆ ಈ ಉದ್ಯಮದ ಜೊತೆ ಜೀವನವನ್ನು ಕಟ್ಟಿಕೊಂಡಿದ್ದಾರೆ.

ನೈಜ ಹಾಲಿನಿಂದ ಮಾನವನ ದೇಹಾರೋಗ್ಯ ವೃದ್ಧಿಯಾಗುತ್ತದೆ. ಅನೇಕ ರೋಗಗಳಿಗೆ ಹಾಲು ರಾಮಬಾಣವೂ ಹೌದು. ಹಾಲಿನಲ್ಲಿ ಹೇರಳವಾದ ಪೋಷಕಾಂಶಗಳು, ಪ್ರೋಟೀನ್‌, ಜಿಡ್ಡು, ಸಕ್ಕರೆ, ಪಿಷ್ಟ, ಕಾರ್ಬೋಹೈಡ್ರೇಟ್‌, ಲವಣ, ಮಿನರಲ್‌ , ಜೀವಸತ್ವ, ನೀರಿನಾಂಶಗಳಿವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತಾಕತ್ತು ಹಾಲಿಗಿದೆ. ಮೂಳೆಗಳ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತದೆ. ಹಾಲಿನಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ, ವಿಟಮಿನ್‌ ಡಿ , ಪೊಟ್ಯಾಷಿಯಂಗಳಿಂದಾಗಿ ಮಕ್ಕಳಲ್ಲಿ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆ ಉತ್ತಮವಾಗುತ್ತದೆ. ಹಾಲಿನಿಂದ ನಿತ್ಯ ಬಳಸುವ ಚಹಾ, ಕಾಫಿ, ಮಾಲ್ಟ್‌, ಮಿಲ್ಕ್‌ ಷೇಕ್‌, ಮಜ್ಜಿಗೆ, ಮೊಸರು, ಬೆಣ್ಣೆ ಮೊದಲಾದವುಗಳನ್ನು ತಯಾರಿಸಬಹುದಾಗಿದೆ. ಒಟ್ಟಿನಲ್ಲಿ ಅನೇಕ ಜನರ ಜೀವನಾಧಾರವಾಗಿ ಈ ಉದ್ಯಮ ಇಂದು ಅಭಿವೃದ್ದಿಯಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!