ಅರೆರೆ..ಪಾಕ್‌ ಪ್ರಧಾನಿಗೆ ಇದೆಂಥಾ ಅವಮಾನ..? ಹಿಂಗ್ಯಾಕಂದ್ರು ಸೌದಿ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಸೌದಿ ಅರೇಬಿಯಾದಲ್ಲಿ ಅವಮಾನಕ್ಕೆ ಗುರಿಯಾಗಿದ್ದಾರೆ. ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು “ಕಳ್ಳ ಕಳ್ಳ” ಎಂದು ಕರೆದಿದ್ದಾರೆ. ಷರೀಫ್ ಮೂರು ದಿನಗಳ ಕಾಲ ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಂಡಿದ್ದರು. ಭೇಟಿಯ ಭಾಗವಾಗಿ, ಷರೀಫ್ ಗುರುವಾರ ಸೌದಿ ಅರೇಬಿಯಾದಲ್ಲಿ ಮುಸ್ಲಿಮರು ಪವಿತ್ರವೆಂದು ಪರಿಗಣಿಸುವ ಮದೀನಾದ ಮಸ್ಜಿದ್-ಎ-ನಬವಿ ಮಸೀದಿಗೆ ಭೇಟಿ ನೀಡಿದರು. ಷರೀಫ್ ಮಸೀದಿ ತಲುಪುತ್ತಿದ್ದಂತೆಯೇ ಅಲ್ಲಿದ್ದ ಮುಸ್ಲಿಮರು “ಚೋರ್ ಚೋರ್ (ಕಳ್ಳ)” ಎಂದು ಘೋಷಣೆ ಕೂಗಿದರು. ಈ ದೃಶ್ಯಗಳನ್ನು ಕೆಲವರು ತಮ್ಮ ಸೆಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಘಟನೆಗೆ ಪ್ರತಿಕ್ರಿಯೆಯಾಗಿ ಸ್ಥಳೀಯ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ಶೆಹಬಾಜ್ ಷರೀಫ್ ಅವಮಾನಕ್ಕೆ ಮಾಹಿತಿ ಸಚಿವ ಔರಂಗಜೇಬ್ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲ ನಡೆದಿದ್ದು ಕಳೆದ ಪ್ರಧಾನಿ ಇಮ್ರಾನ್ ಖಾನ್ ಅವರಿಂದ. ಅಂತಹ ಪವಿತ್ರ ಸ್ಥಳದಲ್ಲಿ ನಾನು ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಏಕೆಂದರೆ ಪವಿತ್ರ ಸ್ಥಳವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರತಿಷ್ಠೆಯನ್ನು ಹಾಳು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಈ ಟೀಕೆಗಳಿಗೆ ಇಮ್ರಾನ್ ಖಾನ್ ಅವರ ಪಕ್ಷದ ಕಚೇರಿ ಪ್ರತಿಕ್ರಿಯೆ ನೀಡಿದ್ದು, ಅಮೆರಿಕಾ ನಡೆಸಿದ ಷಡ್ಯಂತ್ರದ ಮೂಲಕ ಅಧಿಕಾರಕ್ಕೆ ಬಂದ ಷರೀಫ್ ಅವರ ಗ್ಯಾಂಗ್ ಅನ್ನು ಮದೀನಾದಲ್ಲಿ ಕಳ್ಳ ಎಂಬ ಘೋಷಣೆಗಳ ಮೂಲಕ ಸ್ವಾಗತಿಸಲಾಯಿತು ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!