ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಬಿತ್ತು 50,000 ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್

ಪಾಕಿಸ್ತಾನದ ಪಖ್ತುಂಖ್ವಾದಲ್ಲಿ ಸ್ಥಳೀಯ ಚುನಾವಣೆ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಆದರೆ ಸ್ವಾತ್‌ನಲ್ಲಿ ರ್ಯಾಲಿ ನಡೆಸಿ ಭಾಷಣ ಮಾಡುವ ಮೂಲಕ ಪ್ರಧಾನಿ ಇಮ್ರಾನ್ ಖಾನ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಹೀಗಾಗಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನದ ಉನ್ನತ ಚುನಾವಣಾ ಆಯೋಗವು 50,000 ದಂಡ ವಿಧಿಸಿದೆ.
ಸ್ವಾತ್​​ನಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ನಡೆಸುವುದಕ್ಕೆ ಪಾಕ್​ ಚುನಾವಣಾ ಆಯೋಗವು ಮಾರ್ಚ್ 15ರಿಂದ ನಿರ್ಬಂಧ ಹೇರಿತ್ತು. ಆದರೆ ಚುನಾವಣಾ ಆಯೋಗದ ಆದೇಶವನ್ನು ನಿರ್ಲಕ್ಷಿಸಿದ ಇಮ್ರಾನ್​ ಖಾನ್​ ಒಂದು ದಿನದ ಬಳಿಕ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ್ದರು ಎನ್ನಲಾಗಿದೆ.
ನೀತಿ ಸಂಹಿತೆಯ ಪ್ರಕಾರ, ಸಾರ್ವಜನಿಕ ಕಚೇರಿ ಹೊಂದಿದವರು ಚುನಾವಣೆ ನಡೆಯುವ ಜಿಲ್ಲೆಗಳಿಗೆ ಭೇಟಿ ನೀಡುವಂತಿಲ್ಲ. ಖೈಬರ್ ಪಖ್ತುಂಖ್ವಾ ಸ್ಥಳೀಯ ಆಡಳಿತದ ಎರಡನೇ ಹಂತದ ಚುನಾವಣೆ ಮಾರ್ಚ್ 31 ರಂದು ನಿಗದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!