ಮುಂದುವರಿದ ಪಿಟಿಐ ನಾಯಕರ ಬಂಧನ: ಇದೀಗ ಶಿರೀನ್ ಮಜಾರಿ ಸರಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರ ಬಂಧನ ಮುಂದುವರಿದಿದ್ದು, ಪಕ್ಷದ ಹಿರಿಯ ಉಪಾಧ್ಯಕ್ಷೆ ಡಾ. ಶಿರೀನ್ ಮಜಾರಿ ಅವರನ್ನು ಇಸ್ಲಾಮಾಬಾದ್ ಪೊಲೀಸರು ಶುಕ್ರವಾರ ನಸುಕಿನ ವೇಳೆ ರಾಜಧಾನಿಯಲ್ಲಿ ಅವರ ನಿವಾಸದಿಂದ ಬಂಧಿಸಿದ್ದಾರೆ ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

ಇಮ್ರಾನ್ ಖಾನ್, ಅಸದ್ ಉಮರ್, ಫವಾದ್ ಚೌಧರಿ, ಶಾ ಮೆಹಮೂದ್ ಖುರೇಷಿ, ಅಲಿ ಮೊಹಮ್ಮದ್ ಖಾನ್ ಮತ್ತು ಸೆನೆಟರ್ ಎಜಾಜ್ ಚೌಧರಿ ಸೇರಿದಂತೆ ಅನೇಕ ಪಿಟಿಐ ನಾಯಕರ ಸರಣಿ ಬಂಧನವಾಗುತ್ತಿದೆ.

ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಅಧ್ಯಕ್ಷ ಇಮ್ರಾನ್ ಖಾನ್ ಬಂಧನವನ್ನು ಮೇ 11 ರಂದು ಸುಪ್ರೀಂ ಕೋರ್ಟ್ ಬಂಧಿಸಿತ್ತು.
ಇಮ್ರಾನ್ ಖಾನ್ ಅವರನ್ನು ನಾಳೆಯೊಳಗೆ ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ) ಎದುರು ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ಅವರ ಬಂಧನವನ್ನು ಕಾನೂನುಬದ್ಧ ಎಂದು ಘೋಷಿಸಿದ ಅದೇ ನ್ಯಾಯಾಲಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!