ಕಾಂಗ್ರೆಸ್‌ನಿಂದ ತಡರಾತ್ರಿ ಝೂಮ್ ಮೀಟಿಂಗ್, ಆಮಿಷಗಳಿಗೆ ಬಲಿಯಾಗದಂತೆ ಅಭ್ಯರ್ಥಿಗಳಿಗೆ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ, ಅಥವಾ ಅತಂತ್ರವಾಗಲಿದೆ ಎನ್ನುವ ಸೂಚನೆ ಸಿಕ್ಕಿದ್ದು, ಕಾಂಗ್ರೆಸ್ ಚಟುವಟಿಕೆಗಳು ಚುರುಕಾಗಿವೆ.

ಗೆಲುವು ನಮ್ಮದೇ, ಸರ್ಕಾರ ಮಾಡೋದು ನಾವೇ ಎಂದು ಕಾಂಗ್ರೆಸ್ ಹೇಳುತ್ತಿದೆ, ಆದರೂ ಬ್ಯಾಕ್‌ಅಪ್ ಪ್ಲ್ಯಾನ್ ಒಂದನ್ನು ರೆಡಿ ಇಟ್ಟುಕೊಳ್ಳುವ ಬಗ್ಗೆ ಪಕ್ಷ ಯೋಚಿಸಿದೆ.

ತಡರಾತ್ರಿ ತಮ್ಮೆಲ್ಲಾ ಅಭ್ಯರ್ಥಿಗಳ ಜೊತೆ ಝೂಮ್ ಮೀಟಿಂಗ್ ಕಾಲ್ ಮಾಡಲಾಗಿದೆ. ಇಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡು ಗಂಟೆಗಳವರೆಗೆ ಮಾತನಾಡಿದ್ದಾರೆ.

ಸ್ಟ್ರಾಂಗ್ ರೂಮ್‌ಗಳ ಬಗ್ಗೆ ಗಮನ ಇಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಯಾವುದೇ ಆಪರೇಷನ್‌ಗಳಿಗೆ ತುತ್ತಾಗದಂತೆ ಎಚ್ಚರಿಕೆ ನೀಡಲಾಗಿದೆ. ಸಾಕಷ್ಟು ಆಮಿಷಗಳನ್ನು ಇತರ ಪಕ್ಷಗಳು ಒಡ್ಡುತ್ತವೆ, ಆದರೆ ಅದನ್ನು ನೀವು ಪರಿಗಣಿಸದೆ ಪಕ್ಷಕ್ಕೆ ಬದ್ಧರಾಗಿರಬೇಕು, ಎಲ್ಲರೂ ಬೆಂಗಳೂರಿಗೆ ಬಂದು, ಸರ್ಕಾರ ರಚನೆಯಾಗುವವರೆಗೂ ನಾವು ಹೇಳಿದ ಜಾಗದಲ್ಲಿ ಇರಬೇಕು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!