ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಬಲೂಚಿಸ್ತಾನ್‌ನಲ್ಲಿ ಉಗ್ರರ ಗುರಿಯಾಗಿಸಿಕೊಂಡು ಇರಾನ್ ನಡೆಸಿದ ದಾಳಿಗೆ ಪಾಕಿಸ್ತಾನ ಶಾಕ್ ಆಗಿತ್ತು. ಇದೀಗ ಸುಧಾರಿಸಿಕೊಂಡು ಮತ್ತೆ ಇರಾನ್‌ನ ಉಗ್ರರ ನೆಲೆ ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ಮಾಡಿದೆ.
ಇರಾನ್ ಮಾಡಿದ ಮಾರಣಾಂತಿಕ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಹೇಳಿದ್ದ ಪಾಕಿಸ್ತಾನ್ ತನ್ನ ಬದ್ಲಾ ತೀರಿಸಿಕೊಂಡಿದೆ. ಇರಾನ್ ಪಾಕ್ ಮೇಲೆ ದಾಳಿ ನಡೆಸಿದ ಒಂದೇ ದಿನದಲ್ಲಿ ಇದೀಗ ಪಾಕ್ ಇರಾನ್ ಮೇಲೆ ವೈಮಾನಿಕ ದಾಳಿ ಆರಂಭಿಸಿದೆ.
ನಮ್ಮ ದಾಳಿಗಳು ಜೈಶ್-ಅಲ್-ಅದ್ಲ್‌ನ್ನು ಗುರಿಯಾಗಿಸಿಕೊಂಡು ನಡೆದಿದ್ದವು ಎಂದು ಇರಾನ್ ಈಗಾಗಲೇ ಒಪ್ಪಿಕೊಂಡಿದೆ. ಎರಡೂ ದೇಶಗಳು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿವೆ.
ಗಡಿಯಾಚೆ ದಾಳಿ ನಡೆಸುವ ಉಗ್ರಗಾಮಿ ಗುಂಪುಗಳಿಗೆ ಆಶ್ರಯ ನೀಡುತ್ತಿರುವ ಆರೋಪವನ್ನು ಎರಡೂ ರಾಷ್ಟ್ರಗಳು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.