BIG BOSS | ಮಿಡ್‌ ವೀಕ್ ಎಲಿಮಿನೇಷನ್; ತನಿಷಾ ಕುಪ್ಪಂಡ ಔಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ 15ನೇ ವಾರಕ್ಕೆ ಕಾಲಿಟ್ಟಿದೆ. ಈ ವೇಳೆ ಕಳೆದ ವಾರ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿಲ್ಲ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತಿದೆ. ತನಿಷಾ ಕುಪ್ಪಂಡ ವಾರದ ಮಧ್ಯಭಾಗದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.

ತನೀಷಾಳ ಕಾಲಿಗೆ ಪೆಟ್ಟು ಬಿದ್ದಾಗ ಅವರ ಆಟದಲ್ಲಿ ತುಂಬಾ ಏರುಪೇರಾಗಿದೆ. ಮನೆಯಲ್ಲಿ ಅವರು ತಮ್ಮ ಮುಕ್ತ ಮತ್ತು ಧೈರ್ಯದ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದ, ಇತರ ಸ್ಪರ್ಧಿಗಳು ಅವರನ್ನು “ಬೆಂಕಿ” ಎಂದು ಕರೆಯುತ್ತಾರೆ. ಕಳೆದ ವಾರ ಸುದೀಪ್ ಅವರು ಈ ವಾರ ಎಲಿಮಿನೇಷನ್ ಇಲ್ಲ ಎಂದು ಘೋಷಿಸಿದ್ದರು.

ಈ ವಾರ ಯಾರೂ ಮನೆಗೆ ಹೋಗುತ್ತಿಲ್ಲ. ಯಾಕೆ, ಏನು… ಎಲ್ಲವೂ ಮುಂದಿನ ದಿನಗಳಲ್ಲಿ ಬಯಲಾಗಲಿದೆ ಎಂದು ಸುಳಿವನ್ನು ನೀಡಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ವಾರದ ಮಧ್ಯದಲ್ಲಿ ಎಲಿಮಿನೇಷನ್ ನಡೆದಿದೆ.

ಪ್ರೋಮೊದಲ್ಲಿ ಕೂಡ ತನಿಷಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನ್ನ ಧ್ವನಿ ನಿಮಗೆಲ್ಲ ಇನ್ನು ಇರಿಟೇಟ್‌ ಮಾಡುವುದಿಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!