ಆಹಾರ ಬಿಕ್ಕಟ್ಟಿನಲ್ಲಿ ಪಾಕ್:‌ ಫುಡ್‌ ಕಿಟ್‌ ವಿತರಣೆ ವಾಹನದ ಹಿಂದೆ ಓಡಿದ ಜನ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನ ತೀವ್ರ ಆರ್ಥಿಕ ಮತ್ತು ಆಹಾರ ಬಿಕ್ಕಟ್ಟಿಗೆ ತತ್ತರಿಸಿದೆ. ಗೋಧಿ ಹಿಟ್ಟಿಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ.

ಕೆಲವು ವಸ್ತುಗಳ ಬೆಲೆಗಳು 400 ಪ್ರತಿಶತದಷ್ಟು ಹೆಚ್ಚಾಗಿದೆ, ಪ್ರಕಾರ, ಕಳೆದ ವರ್ಷ ಜನವರಿಯಲ್ಲಿ 42 ರೂಪಾಯಿ ಇದ್ದ ಈರುಳ್ಳಿ ಬೆಲೆ ಈಗ 226 ರೂ. ಅಂದರೆ ಶೇ.437ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಜನವರಿಯಲ್ಲಿ 203 ರೂಪಾಯಿ ಇದ್ದ ಕೋಳಿಮಾಂಸದ ಬೆಲೆ ಈಗ 366 ರೂಪಾಯಿ, ಸಾಬೂನು ಕಳೆದ ಜನವರಿಯಲ್ಲಿ 54 ರೂಪಾಯಿ ಇದ್ದು ಈಗ 88 ರೂಪಾಯಿ ಆಗಿದೆ. 20 ಕೆಜಿ ಗೋಧಿ ಹಿಟ್ಟಿನ ಚೀಲ ಬೆಲೆ 1161 ರೂ.ನಿಂದ 1812 ರೂ.ಗೆ ಏರಿಕೆಯಾಗಿದೆ.

ಬೇಳೆಕಾಳುಗಳ ಬೆಲೆ 172ರಿಂದ 262 ರೂ.ಗೆ ಏರಿಕೆ. ಲೀಟರ್ ಹಾಲು 115 ರೂ.ನಿಂದ 150 ರೂ.ಗೆ ಏರಿಕೆಯಾಗಿದ್ದು, ಡಜನ್ ಬಾಳೆಹಣ್ಣು 83 ರೂ.ನಿಂದ 121 ರೂ.ಗೆ ಏರಿಕೆಯಾಗಿದೆ, ಮತ್ತು ಎಲ್ಪಿಜಿ ಸಿಲಿಂಡರ್ ಬೆಲೆ 2373 ರೂ.ನಿಂದ 2680 ರೂ.ಗೆ ಏರಿಕೆಯಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಜನರು ಹಣ ನೀಡಲು ಸಿದ್ಧರಿದ್ದರೂ ಆಹಾರ ಸಿಗುತ್ತಿಲ್ಲ.

ಪಾಕಿಸ್ತಾನದಲ್ಲಿ ಆಹಾರದ ಕೊರತೆ ಹೇಗಿದೆ ಎಂಬುದನ್ನು ತೋರಿಸುವ ವಿಡಿಯೋವೊಂದು ಹೊರಬಿದ್ದಿದೆ. ವೀಡಿಯೋದಲ್ಲಿ ಕೆಲವರು ಬೈಕ್‌ನಲ್ಲಿ ಆಹಾರ ವಿತರಿಸುವ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ವಾಹನವನ್ನು ಹಿಂಬಾಲಿಸಿ ಹಣ ತೆಗೆದುಕೊಂಡು ಹೋಗಿ ಗೋಧಿ ಹಿಟ್ಟಿನ ಚೀಲ ಕೊಡುವಂತೆ ಕೇಳುತ್ತಿದ್ದಾರೆ. ಇಂತಹ ದೃಶ್ಯಗಳು ಈಗ ಪಾಕಿಸ್ತಾನದಲ್ಲಿ ಸಾಮಾನ್ಯವಾಗಿದೆ. ಪ್ರತಿದಿನ ಇದೇ ಪರಿಸ್ಥಿತಿ ಎದುರಿಸುತ್ತಿರುವ ಪಾಕ್‌ ವಿರುದ್ಧ ಅಲ್ಲಿನ ಜನ ಆಕ್ರೋಶ ಹೊರಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!