ಮನೆಗೆ ನುಗ್ಗಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ: 6ತಿಂಗಳ ಮಗು ಸೇರಿ 6ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದಲ್ಲಿ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಬೆಳಗಿನ ಜಾವ 3:30 ಗಂಟೆಗೆ ಕ್ಯಾಲಿಫೋರ್ನಿಯಾದ ಜೋಕ್ವಿನ್ ವ್ಯಾಲಿಯ ತುಲರೇಸನ್ ಪಟ್ಟಣದಲ್ಲಿ ಅಪರಿಚಿತ ವ್ಯಕ್ತಿಗಳು ಮನೆಯೊಂದರ ಮೇಲೆ ಗುಂಡು ಹಾರಿಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಆರು ತಿಂಗಳ ಮಗು ಮತ್ತು ಆಕೆಯ ತಾಯಿ ಸೇರಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಗುಂಡಿನ ದಾಳಿಯ ನಂತರ ಕೆಲವರ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಸ್ಥಳೀಯರು ಸ್ಪಂದಿಸಿ ತುರ್ತು ವೈದ್ಯಕೀಯ ಸೇವೆ ಒದಗಿಸಿದ್ದಾರೆ. ಬಳಿಕ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಕೃತ್ಯ ಎಸಗಿದವರು ಡ್ರಗ್ ಗ್ಯಾಂಗ್ ಎಂದು ಟುಲೇರ್ ಕೌಂಟಿ ಶೆರಿಫ್ ಕಚೇರಿಯ ಶೆರಿಫ್ ಮೈಕ್ ಬೌಡ್ರೊಕ್ಸ್ ಹೇಳಿದ್ದಾರೆ. ಮಗು ಹಾಗೂ ಮಗುವಿನ ತಾಯಿಯ ತಲೆಗೆ ಗುಂಡು ತಗುಲಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಇದು ಆಕಸ್ಮಿಕವಾಗಿ ನಡೆದ ಹಿಂಸಾಚಾರವಲ್ಲ, ಯೋಜನೆಯ ಪ್ರಕಾರ ಗುಂಡಿನ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಒಂದು ವಾರದ ಹಿಂದೆ ಮಾದಕ ದ್ರವ್ಯ ಇಲಾಖೆಯ ಅಧಿಕಾರಿಗಳು ಆ ನಿವಾಸದಲ್ಲಿ ತಪಾಸಣೆ ನಡೆಸಿದ್ದರು. ಮಾದಕ ದ್ರವ್ಯ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ. ಒಂದು ವಾರದ ತಪಾಸಣೆಯ ನಂತರ, ಮನೆಯ ಮೇಲೆ ಅಪರಿಚಿತ ಗ್ಯಾಂಗ್ ಸದಸ್ಯರು ದಾಳಿ ಮಾಡಿದ್ದಾರೆ. ಗುಂಡಿನ ದಾಳಿಯ ವೇಳೆ ಎಚ್ಚರ ವಹಿಸಿದ್ದರಿಂದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿರುವ ಶಂಕೆ ಇದೆ. ಅವರಿಗಾಗಿ ಹುಡುಕಾಟ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!