ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ವಿಮಾನ ಆಕಾರದ ಬಲೂನ್ ಪತ್ತೆಯಾಗಿದೆ. ಬಲೂನ್ ಮೇಲೆ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ನ ಲೋಗೋ ಬರೆಯಲಾಗಿದೆ. ಕಥುವಾ ಜಿಲ್ಲೆಯ ಹೀರಾನಗರದಲ್ಲಿ ಕಪ್ಪು ಬಿಳುಪು ಬಣ್ಣದ ನಿಗೂಢ ಬಲೂನ್ ನೆಲಕ್ಕೆ ಬಿದ್ದಿದ್ದು, ಭದ್ರತಾ ಪಡೆಗಳು ಬಲೂನನ್ನು ವಶಪಡಿಸಿಕೊಂಡಿವೆ. ಬಲೂನ್ ಬಿದ್ದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ, ಶಿಮ್ಲಾದ ಸೇಬಿನ ತೋಟದಲ್ಲಿ ವಿಮಾನದ ಆಕಾರದಲ್ಲಿ ಹಸಿರು ಮತ್ತು ಬಿಳಿ ಬಲೂನ್ ಕಂಡುಬಂದಿತ್ತು. ಬಲೂನ್‌ನಲ್ಲಿ ಪಾಕಿಸ್ತಾನ್ ಏರ್‌ಲೈನ್ಸ್‌ನ ಲೋಗೋವನ್ನು ಮುದ್ರಿಸಲಾಗಿದೆ. ಇದೀಗ ಎರಡನೇ ಬಲೂನ್ ಪತ್ತೆಯಾಗಿದ್ದು, ಸ್ಥಳೀಯ ಜನರಲ್ಲಿ ಆತಂಕ ವ್ಯಕ್ತವಾಗಿದೆ.
ಮೇ 20 ರಂದು ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಲಾಯಿತು. ಶಂಕಿತ ಮಾದಕವಸ್ತುಗಳಿದ್ದ ಚೀಲವನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.ಇದಕ್ಕೆ ಮುನ್ನವೇ ನಾಲ್ಕು ಪಾಕಿಸ್ತಾನಿ ಡ್ರೋನ್‌ಗಳನ್ನು ಬಿಎಸ್‌ಎಫ್ ತಡೆದಿತ್ತು.