CINE| ಅದ್ದೂರಿಯಾಗಿ ಜರುಗಿತು ವರುಣ್-ಲಾವಣ್ಯ ನಿಶ್ಚಿತಾರ್ಥ: ಮೆಗಾ, ಅಲ್ಲು ಕುಟುಂಬಗಳು ಹಾಜರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೆಗಾ ಪ್ರಿನ್ಸ್ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಪ್ರೀತಿ ಫಲಪ್ರದವಾಗಿದೆ. ಎರಡು ಕುಟುಂಬಗಳ ಸಮ್ಮುಖದಲ್ಲಿ ನಿನ್ನೆ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ಹೈದರಾಬಾದ್‌ನಲ್ಲಿರುವ ನಾಗಬಾಬು ಅವರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ವರುಣ್-ಲಾವಣ್ಯ ಇಬ್ಬರೂ ಉಂಗುರ-ಹಾರ ಬದಲಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಆಗಮಿಸಿದರು. ಅಲ್ಲದೆ ವೈಷ್ಣವ ತೇಜ್ ಮತ್ತು ಇತರ ಮೆಗಾ ಹೀರೋಗಳೂ ಸಮಾರಂಭದಲ್ಲಿ ಭಾಗಿಯಾದರು.

ವರುಣ್ ಮತ್ತು ಲಾವಣ್ಯ ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಂತರಿಕ್ಷಂ ಸಿನಿಮಾದ ಕಾಲದಿಂದಲೂ ಆತ್ಮೀಯರಾಗಿದ್ದ ನಂತರ ಪ್ರೀತಿಯಲ್ಲಿ ಬಿದ್ದರು ಎಂದು ಹೇಳಿಕೊಂಡಿದ್ದಾರೆ. ಅಂದಿನಿಂದ ಸೀಕ್ರೆಟ್ ಆಗಿದ್ದ ಇವರ ಲವ್ ಸ್ಟೋರಿ ಹೊರಬಿದ್ದಿದ್ದು, ಅಂತಿಮ ಗಟ್ಟ ತಲುಪಿದೆ.

ಇಬ್ಬರಿಗೂ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ರಂಗದ ಗಣ್ಯರು ಹಾಗೂ ಅಭಿಮಾನಿಗಳು ಇಬ್ಬರಿಗೂ ಶುಭಾಶಯ ಕೋರುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!