ಭಾರತದ ಪರ ಸದಾ ಧ್ವನಿ ಎತ್ತುವ ಪಾಕ್ ಲೇಖಕ ತಾರೆಕ್ ಫತಹ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಸನಾತನ ಧರ್ಮ, ಹಿಂದೂ ದೇಗಲು, ನಗರಗಳ ಮರುನಾಮಕರಣ ಸೇರಿದಂತೆ ಭಾರತೀಯತೆ ಕುರಿತು ಸದಾ ಧ್ವನಿ ಎತ್ತುವ ಪಾಕಿಸ್ತಾನ ಮೂಲದ ಖ್ಯಾತ ಲೇಖಕ ತಾರೆಕ್ ಫತಹ್ ನಿಧನರಾಗಿದ್ದಾರೆ.

73 ವರ್ಷದ ತಾರೆಕ್ ಫತಹ್ ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ತಾರೆಕ್ ಫತಹ್ ಮೂಲ ಪಾಕಿಸ್ತಾನ. ಆದರೆ ಕೆನಡಾದಲ್ಲಿ ನೆಲೆಸಿದ್ದ ತಾರೆಕ್ ಫತಹ್ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಇಷ್ಟೇ ಅಲ್ಲ ಪಾಕಿಸ್ತಾನದ ಭಯೋತ್ಪಾದಕತೆ, ಕುತಂತ್ರ ಬುದ್ದಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ಪಂಜಾಬ್ ಸಿಂಹ್, ಹಿಂದೂಸ್ಥಾನದ ಪುತ್ರ, ಕೆನಡಾದ ಸಂಗಾತಿ, ಸತ್ಯವನ್ನು ನಿರ್ಭೀತಿಯಿಂದ ಹೇಳುವ, ನ್ಯಾಯಕ್ಕಾಗಿ ಹೋರಾಡುವ, ತುಳಿತಕ್ಕೊಳಗಾಗಿರುವ ಪರವಾಗಿ ನಿಲ್ಲುವ ಅಪರೂಪದ ವ್ಯಕ್ತಿತ್ವ ಹೊಂದಿರುವ ಖ್ಯಾತ ಲೇಖಕ ತಾರಕ್ ಫತಹ್ ನಿಧನರಾಗಿದ್ದಾರೆ ಎಂದು ಪುತ್ರಿ ನತಾಶ ಫತಹ ಟ್ವಿಟರ್ ಮೂಲಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ತಾರಕ್ ಪತೇಹ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಸೂಚಿಸಿದ್ದರು. ಭಾರತದ ಹಲವು ಖಾಸಗಿ ಸುದ್ದಿ ವಾಹನಿಗಳ ಸಂದರ್ಶನದಲ್ಲಿ ಫತೇಹ್ ಪಾಲ್ಗೊಂಡು ನಿರ್ಭಿತಿಯಿಂದ ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ರೈಲು ನಿಲ್ದಾಣದ ಹೆಸರು, ನಗರಗಳ ಹೆಸರು ಮರುನಾಮಕರಣ ನಿರ್ಧಾರವನ್ನು ತಾರೆಕ್ ಫತಹ್ ಸಮರ್ಥಿಸಿಕೊಂಡಿದ್ದರು. ಭಾರತ, ಭಾರತವಾಗಿ ಉಳಿಯಬೇಕು ಎಂದರೆ ಇದರ ಅಗತ್ಯವಿದೆ. ಇದು ಪವಿತ್ರ ಹಿಂದೂ ದೇಶ ಎಂದು ತಾರಕ್ ಫತಹ್ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿಯ ವಿದೇಶಾಂಗ ನೀತಿ, ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಜಾಗತಿಕವಾಗಿ ಮನ್ನಣೆಗಳಿಸುಂತೆ ಮಾಡಿದ ನಾಯಕ ಮೋದಿ ಎಂದಿದ್ದರು. 1949ರಲ್ಲಿ ಪಾಕಿಸ್ತಾನದಲ್ಲಿ ಹುಟ್ಟಿದ ತಾರೆಕ್ ಫತಹ್, 1980ರಲ್ಲಿ ಕೆನಡಾಗೆ ಸ್ಥಳಾಂತರಗೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!