Wednesday, June 7, 2023

Latest Posts

ಯುವಶಕ್ತಿ ಒಗ್ಗೂಡಿದಾಗ ಯಶಸ್ಸು ನಿಶ್ಚಿತ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಕೊಚ್ಚಿಯಲ್ಲಿ ನಡೆದ ಯುವಂ-23 (Yuvam 2023) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಿಯ ಮಲಯಾಳಿ ಯುವ ಸುಹುರ್ತುಕ್ಕಳೇ ಮನಸ್ಕಾರಂ (‘ನನ್ನ ಪ್ರೀತಿಯ ಮಲಯಾಳಿ ಯುವ ಗೆಳೆಯರಿಗೆ ನಮಸ್ಕಾರಗಳು’) ಎಂದು ಮಲಯಾಳಂನಲ್ಲಿ ಹೇಳುತ್ತಾ ಮಾತು ಶುರುಮಾಡಿದರು.

ಕೇರಳವನ್ನು ಪರಿವರ್ತಿಸಲು ಮುಂದೆ ಬಂದ ಯುವಕ ಯುವತಿಯರಿಗೆ ಅಭಿನಂದನೆಗಳು. ಯುವಕ ಯುವತಿಯರ ಶಕ್ತಿ ಒಗ್ಗೂಡಿದಾಗ ಯಾವುದೇ ಕಾರ್ಯಾಚರಣೆ ಯಶಸ್ವಿಯಾಗುತ್ತದೆ. ದೇಶ ಮತ್ತು ಸೇಕ್ರೆಡ್ ಹಾರ್ಟ್ ಕಾಲೇಜು 75ನೇ ವರ್ಷ ಆಚರಿಸುತ್ತಿರುವಾಗ ಇಲ್ಲಿಗೆ ಬಂದಿರುವುದು ಸಂತೋಷ ತಂದಿದೆ ಎಂದರು .

ನಾನು ಕೆಲವು ವಾರಗಳ ಹಿಂದೆ ಕೇರಳದ 99 ವರ್ಷದ ಯುವಕರನ್ನು ಭೇಟಿಯಾಗಿದ್ದೆ.ಅವರೇ ಗಾಂಧಿವಾದಿ ವಿ.ಪಿ. ಅಪ್ಪುಕುಟ್ಟ ಪೊದುವಾಳ್.ಬಿಜೆಪಿ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿತು ಎಂದು ಮೋದಿ ಹೇಳಿದ್ದಾರೆ.

ಕಳರಿಪಯಟ್ಟ್ ಗುರು ಎಸ್.ಆರ್.ಡಿ. ಪ್ರಸಾದ್‌ನಿಂದ ಹಿಡಿದು ಚೆರುವಯಲ್ ರಾಮನ್‌ವರೆಗೆ ಪ್ರತಿಯೊಬ್ಬ ಪ್ರತಿಭಾವಂತರಿಂದ ಕಲಿಯುವುದು ಬಹಳಷ್ಟಿದೆ. ನಂಬಿ ನಾರಾಯಣರಿಂದ ಸ್ಫೂರ್ತಿ ಪಡೆದ ಅನೇಕ ಯುವಕರು ಇದ್ದಾರೆ ಎಂದು ಮೋದಿ ಹೇಳಿದ್ದಾರೆ.ತಮ್ಮ ಭಾಷಣದಲ್ಲಿ ಆದಿ ಶಂಕರನ್, ಶ್ರೀ ನಾರಾಯಣ ಗುರುಗಳನ್ನೂ ಮೋದಿ ಸ್ಮರಿಸಿದ್ದಾರೆ.

ದೇಶದ ಭರವಸೆ ಯುವಕರಲ್ಲಿದೆ. ಬಿಜೆಪಿ ಮತ್ತು ಯುವಕರ ದೃಷ್ಟಿಕೋನ ಒಂದೇ. ಬಿಜೆಪಿ ಯುವಕರಿಗೆ ಅವಕಾಶ ನೀಡಿದೆ. ಬಿಜೆಪಿ ಸೃಷ್ಟಿಸಿರುವ ಬದಲಾವಣೆ ಯುವಕರಿಗೆ ಅನುಕೂಲವಾಗಲಿದೆ. ಕೇರಳ ಸರಕಾರ ಯುವಕರನ್ನು ಕಡೆಗಣಿಸಿದೆ. ಉದ್ಯೋಗ ಮೇಳ ನಡೆಸಲು ಕೇರಳ ಹಿಂದೇಟು ಹಾಕುತ್ತಿದೆ. ಆದರೆ, ಬಿಜೆಪಿ ಆಡಳಿತವಿರುವಲ್ಲೆಲ್ಲ ಉದ್ಯೋಗ ಮೇಳ ನಡೆಯುತ್ತಿತ್ತು. ಬಿಜೆಪಿ ಸರಕಾರದಿಂದ ಅನೇಕ ಪ್ರತಿಭಾವಂತರನ್ನು ಸನ್ಮಾನಿಸಲಾಗಿದೆ. ಹಿಂದಿನ ಆಡಳಿತಗಾರರು ಹಗರಣ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ಕೇರಳಕ್ಕೆ ಬರುವಾಗ ವಿಶೇಷ ಶಕ್ತಿ ಬರುತ್ತದೆ. ಜಿ20 ಸಭೆ ನಡೆದಾಗ ಕೇರಳಿಗರು ಮಿಂಚಿದ್ದರು. ರಾಜ್ಯದ ಮೂಲಸೌಕರ್ಯವನ್ನು ಇನ್ನಷ್ಟು ಸುಧಾರಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಈ ಶತಮಾನ ಭಾರತದ್ದಾಗಿದೆ ಎಂದು ಹೇಳಿದ ಪ್ರಧಾನಿ, ಭಾರತವು ಜಗತ್ತನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ದೇಶವಾಗಿದೆ ಎಂದರು.

ಮೋದಿ ಜೊತೆ ವೇದಿಕೆ ಹಂಚಿಕೊಂಡ ಮಲಯಾಳಂ ಸಿನಿ ತಾರೆಯರು
ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ಬಿಜೆಪಿಯ ಹಿರಿಯ ನಾಯಕರಾದ ಅನಿಲ್ ಆಂಟನಿ, ನಟಿಯರಾದ ಅಪರ್ಣಾ ಬಾಲಮುರಳಿ ಮತ್ತು ನವ್ಯಾ ನಾಯರ್, ಗಾಯಕರಾದ ವಿಜಯ್ ಯೇಸುದಾಸ್ ಮತ್ತು ಹರಿಶಂಕರ್ ಮತ್ತು ನಟರಾದ ಉಣ್ಣಿ ಮುಕುಂದನ್ ಮತ್ತು ಸುರೇಶ್ ಗೋಪಿ ಕೂಡ ಪ್ರಧಾನಿ ಜೊತೆ ವೇದಿಕೆಯಲ್ಲಿ ಆಸೀನರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!