ಕೀನ್ಯಾದಲ್ಲಿ ಪಾಕಿಸ್ತಾನ ಪತ್ರಕರ್ತ ಅರ್ಷದ್ ಷರೀಫ್ ನ ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನಿ ಪತ್ರಕರ್ತ ಅರ್ಷದ್ ಷರೀಫ್ ಕೀನ್ಯಾದಲ್ಲಿ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಅವರ ಪತ್ನಿ ಖಚಿತಪಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅರ್ಷದ್ ಷರೀಫ್ ಪತ್ನಿ ಜವೇರಿಯಾ ಸಿದ್ದಿಕ್ , ನಾನು ಇಂದು ಸ್ನೇಹಿತ, ಪತಿ ಮತ್ತು ನನ್ನ ನೆಚ್ಚಿನ ಪತ್ರಕರ್ತನನ್ನು ಕಳೆದುಕೊಂಡಿದ್ದೇನೆ. ನಮ್ಮ ಗೌಪ್ಯತೆಯನ್ನು ಗೌರವಿಸಿ ಮತ್ತು ಬ್ರೇಕಿಂಗ್ ಹೆಸರಿನಲ್ಲಿ ದಯವಿಟ್ಟು ನಮ್ಮ ಕುಟುಂಬದ ಚಿತ್ರಗಳು, ವೈಯಕ್ತಿಕ ವಿವರಗಳು ಮತ್ತು ಆಸ್ಪತ್ರೆಯಿಂದ ಅವರ ಕೊನೆಯ ಚಿತ್ರಗಳನ್ನು ಹಂಚಿಕೊಳ್ಳಬೇಡಿ. ನಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ಸ್ಮರಿಸಿ ಎಂದಿದ್ದಾರೆ.

ಷರೀಫ್ ಅವರ ಹತ್ಯೆಗೆ ಹೆದರಿ ಪಾಕಿಸ್ತಾನದಿಂದ ದುಬೈಗೆ ತೆರಳಿದ್ದರು. ಅವರ ಆಪ್ತರು ಹೇಳುವ ಪ್ರಕಾರ, ದುಬೈನಲ್ಲಿಯೂ ತನ್ನನ್ನು ಪತ್ತೆ ಮಾಡಲಾಗುತ್ತಿದೆ ಎಂದು ತಿಳಿದ ನಂತರ ಷರೀಫ್ ಕೀನ್ಯಾಗೆ ತೆರಳಿದರು. ಷರೀಫ್ ಹತ್ಯೆಗೆ ಅಫ್ಘಾನಿಸ್ತಾನದ ಹಂತಕರು ಸಂಚು ರೂಪಿಸಿದ್ದರು ಎನ್ನಲಾಗಿದೆ.

ನೈರೋಬಿಯ ಹೊರವಲಯದಲ್ಲಿ ಷರೀಫ್ ಅವರ ತಲೆಗೆ ಗುಂಡು ಹಾರಿಸಲಾಗಿದೆ ಎನ್ನಲಾಗುತ್ತಿದೆ.

ಪತ್ರಕರ್ತನ ನಿಧನವನ್ನು ವಿದೇಶಾಂಗ ಕಚೇರಿ ದೃಢೀಕರಿಸಿದ್ದು, ಕೀನ್ಯಾದಲ್ಲಿರುವ ಪಾಕಿಸ್ತಾನದ ಹೈಕಮಿಷನರ್, ಇತರ ಅಧಿಕಾರಿಗಳೊಂದಿಗೆ ನೈರೋಬಿಯ ಚಿರೊಮೊ ಫ್ಯೂನರಲ್ ಹೌಸ್ ಅನ್ನು ಹೋಗಿ ಷರೀಫ್ ಅವರ ಮೃತದೇಹವನ್ನು ಗುರುತಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಅರ್ಷದ್ ಷರೀಫ್ ನಿಧನಕ್ಕೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!