ರುಚಿಯಾದ ಸಬ್ಬಕ್ಕಿ ಇಡ್ಲಿ ಮಾಡಿ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು: 

ಇಡ್ಲಿ ರವಾ: 2 ಕಪ್
ಸಬ್ಬಕ್ಕಿ: 1 ಕಪ್
ಮೊಸರು: 2 ಕಪ್
ಕ್ಯಾರೆಟ್ ತುರಿ: ಎರಡು ಚಮಚ
ಹಸಿರು ಮೆಣಸಿನಕಾಯಿ: ನಾಲ್ಕು
ಹಸಿ ತೆಂಗಿನಕಾಯಿ ತುರಿ: ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಸಾಸಿವೆ, ಜೀರಿಗೆ, ಕಡಲೆಬೇಳೆ,: ಅರ್ಧ ಟೀ. ಚಮಚ
ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು: ಸ್ವಲ್ಪ
ಎಣ್ಣೆ: ಸಾಕಷ್ಟು

ಮಾಡುವ ವಿಧಾನ:

ಒಂದು ಬಟ್ಟಲಿನಲ್ಲಿ ಇಡ್ಲಿ ರವೆ, ಸಬ್ಬಕ್ಕಿ, ಮೊಸರು ಸೇರಿಸಿ, ಅವಶ್ಯಕತೆಯಿದ್ದಷ್ಟು ನೀರು ಹಾಕಿ ಇಡ್ಲಿ ಹಿಟ್ಟಿನಂತೆ ಕಲಸಿ ಐದಾರು ಗಂಟೆ ನೆನೆಯಲು ಬಿಡಿ. ಚೆನ್ನಾಗಿ ನೆನೆಸಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಹಸಿ ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಮತ್ತು ಜೀರಿಗೆ ಹಾಕಿ ನಂತರ ಕಡಲೆಬೇಳೆ ಒಗ್ಗರಣೆ ಮಾಡಿ ಹಿಟ್ಟಿಗೆ ಹಾಕಿ ಕಲಸಿ. ಈ ಮಿಶ್ರಣವನ್ನು ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಾಕಿ ಹಬೆಯಲ್ಲಿ ಬೇಯಿಸಿ. ಚಟ್ನಿ ಅಥವಾ ಸಾಂಬಾರ್ ಜೊತೆ ಈ ಇಡ್ಲಿ ರುಚಿಯಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!