ಪಾಕ್ ಮಹಿಳೆ ಸೀಮಾ ಹೈದರ್‌ಗೆ ನೋಯ್ಡಾ ಕೋರ್ಟ್‌ನಿಂದ ಸಮನ್ಸ್‌ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಿಯಕರನಿಗಾಗಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ಗೆ ನೋಯ್ಡಾದ ಕೌಟುಂಬಿಕ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಸೀಮಾ ಹೈದರ್ ತನ್ನ ನಾಲ್ಕು ಅಪ್ರಾಪ್ತ ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು. ಮೊಬೈಲ್‌ ಗೇಮ್‌ PUBG ಆಡುವಾಗ ಭಾರತದ ಸಚಿನ್‌ ಮೀನಾ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ತನ್ನ ಸಂಗಾತಿಗಾಗಿ ಪಾಕ್‌ನಿಂದ ಭಾರತಕ್ಕೆ ಸೀಮಾ ಬಂದು ನೆಲೆಸಿದ್ದಾರೆ. ಕಳೆದ ತಿಂಗಳು ಇಬ್ಬರೂ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಹ ಆಚರಿಸಿಕೊಂಡಿದ್ದರು.

ಆದರೆ ಕರಾಚಿಯಲ್ಲಿ ನೆಲೆಸಿರುವ ಸೀಮಾ ಪತಿ ಗುಲಾಮ್‌ ಹೈದರ್‌ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಭಾರತೀಯ ವಕೀಲರ ಮೂಲಕ ನೋಯ್ಡಾದ ಕೌಟುಂಬಿಕ ನ್ಯಾಯಾಲಯದಲ್ಲಿ ಸಚಿನ್ ಮೀನಾ ಜೊತೆಗಿನ ಸೀಮಾ ವಿವಾಹದ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಗುಲಾಮ್‌ ಹೈದರ್‌ ತಮ್ಮ ಅರ್ಜಿಯಲ್ಲಿ, ತನ್ನ ಮಕ್ಕಳ ಧಾರ್ಮಿಕ ಮತಾಂತರವನ್ನು ಪ್ರಶ್ನಿಸಿದ್ದಾರೆ. ಅವರ ವಕೀಲ ಮೊಮಿನ್ ಮಲಿಕ್, ಗುಲಾಮ್ ಹೈದರ್‌ನಿಂದ ಸೀಮಾ ವಿಚ್ಛೇದನ ಪಡೆದಿಲ್ಲ. ಸಚಿನ್ ಜೊತೆಗಿನ ಅವರ ಮದುವೆ ಮಾನ್ಯವಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೇ 27ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈದರ್‌ಗೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!