ವಿವಿಪ್ಯಾಟ್ ಸ್ಲಿಪ್ ಅರ್ಜಿ ವಿಚಾರಣೆ: ಪೇಪರ್ ಬ್ಯಾಲೆಟ್ ಮತದಾನದಲ್ಲಿಏನೆಲ್ಲಾ ಆಗಿದೆ ಅನ್ನೋದು ಮರೆತಿಲ್ಲ ಎಂದು ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೆ ವೇಳೆ ಇವಿಎಂ ವಿರುದ್ಧ ಆರೋಪ, ಪೇಪರ್ ಬ್ಯಾಲೆಟ್ ಚುನಾವಣೆಯೇ ಸೂಕ್ತ ಅನ್ನೋ ಆರೋಪಗಳು, ಆಗ್ರಹಗಳನ್ನು ವಿಪಕ್ಷಗಳು ಮಾಡುತ್ತಲೇ ಬಂದಿದೆ. ಇದೀಗ ವಿವಿಪ್ಯಾಟ್ ಸ್ಲಿಪ್ ಕುರಿತು ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ನಾವೀಗ 60ರ ವಯಸ್ಸಿನಲ್ಲಿದ್ದೇವೆ. ಪೇಪರ್ ಬ್ಯಾಲೆಟ್ ಚುನಾವಣೆಯಲ್ಲಿ ಏನೆಲ್ಲಾ ಆಗಿದೆ ಅನ್ನೋದು ಮರೆತಿಲ್ಲ. ಬಹುಷ ನೀವು ಮರೆತಿರಬಹುದು ಎಂದು ಜಸ್ಟೀಸ್ ಸಂಜೀವ್ ಖನ್ನ ಖಡಕ್ ಉತ್ತರ ನೀಡಿದ್ದಾರೆ.

ಇವಿಎಂ ಬೇಡ, ಪೇಪರ್ ಬ್ಯಾಲೆಟ್ ಮತದಾನ ಸಾಕು ಎಂದು ವಾದಿಸುತ್ತಿರುವ ವಿಪಕ್ಷಗಳು ಇದೀಗ ಇವಿಎಂ ಮತದಾನ ವೇಳೆ ವಿವಿಪ್ಯಾಟ್ ಸ್ಲಿಪ್ ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿದೆ. ತಾವು ಹಾಕಿದ ಮತ ಸರಿಯಾಗಿ, ಸರಿಯಾದ ಪಕ್ಷದ ನಾಯಕನಿಗೆ ಬಿದ್ದಿದೆ ಅನ್ನೋದು ಖಾತ್ರಿಪಡಿಸಿಕೊಳ್ಳಲು ವಿವಿಪ್ಯಾಟ್ ಅತೀ ಅಗತ್ಯವಾಗಿದೆ. ಇಲ್ಲವಾದಲ್ಲಿ ಇವಿಎಂ ಮೂಲಕ ಮತಗಳನ್ನು ತಿರುಚಲಾಗುತ್ತಿದೆ ಎಂದು ಪ್ರಶಾಂತ್ ಭೂಷಣ ವಾದ ಮಂಡಿಸಿದ್ದಾರೆ.

ಈ ವೇಳೆ ಪ್ರತಿಕ್ರಿಯೆ ನೀಡಿದ ಜಸ್ಟೀಸ್ ಸಂಜೀವ್ ಖನ್ನ, ನಮಗೆ 60ರ ಆಸುಪಾಸು, ನಾವು ಪೇಪರ್ ಬ್ಯಾಲೆಟ್ ಮತದಾನವನ್ನೂ ನೋಡಿದ್ದೇವೆ. ಈ ವೇಳೆ ಏನೆಲ್ಲಾ ಆಗಿದೆ ಅನ್ನೋದು ನೀವು ಮರೆತಿರಬಹುದು. ಆದರೆ ನಾವು ಮರೆತಿಲ್ಲ ಎಂದಿದ್ದಾರೆ. ಸದ್ಯ ಇರುವ ಸಿಸ್ಟಮ್ ನಿರ್ನಾಮ ಮಾಡಲು ಯತ್ನಿಸಬೇಡಿ, ಸುಧಾರಣೆಗೆ ಸಲಹೆ ನೀಡಿ ಎಂದು ಖಡಕ್ ಉತ್ತರ ನೀಡಿದೆ.

ಸದ್ಯ ವಿವಿಪ್ಯಾಟ್ ಸ್ಲಿಪ್ ಪ್ರತಿ ಕ್ಷೇತ್ರದ 5 ಇವಿಎಂನಲ್ಲಿ ಮಾತ್ರ ಲಭ್ಯವಿದೆ.ಇದು ಎಲ್ಲಾ ಇವಿಎಂ ಮಶೀನ್‌ನಲ್ಲಿ ಲಭ್ಯವಾಗಬೇಕು. ಪ್ರತಿಯೊಬ್ಬರ ಮತ ಸರಿಯಾಗಿ ತಲುಪಿದೆ ಅನ್ನೋದು ಖಾತ್ರಿಯಾಗಬೇಕು ಎಂದು ಪ್ರಶಾಂತ್ ಭೂಷಣ ವಾದ ಮಂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!