Thursday, February 2, 2023

Latest Posts

ಆರು ಪತ್ನಿಯರು, ಬರೋಬ್ಬರಿ 54 ಮಕ್ಕಳನ್ನು ಹೊಂದಿದ್ದ ಪಾಕಿಸ್ತಾನಿ ವ್ಯಕ್ತಿ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದಲ್ಲಿ 6 ಮದುವೆಯಾಗಿ ಬರೋಬ್ಬರಿ 54 ಮಕ್ಕಳ ತಂದೆಯಾಗಿ ಹೆಸರುವಾಸಿಯಾಗಿದ್ದ , 75 ವರ್ಷದ ಬದುಲ್ ಮಜೀದ್ ಮೆಂಗಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಾಕಿಸ್ತಾನದ ನೈಋತ್ಯ ನಗರವಾದ ಕ್ವೆಟ್ಟಾದಿಂದ ಪಶ್ಚಿಮಕ್ಕೆ 130 ಕಿಮೀ ದೂರದಲ್ಲಿರುವ ಬಲೂಚಿಸ್ತಾನದ ನೋಶ್ಕಿಯ ನಿವಾಸಿಯಾದ ಮೆಂಗಲ್ ಆರು ವಿವಾಹವಾಗಿದ್ದರು. ಅವರ 54 ಮಕ್ಕಳಲ್ಲಿ ಹನ್ನೆರಡು ಮಂದಿ ಹಸಿವಿನಿಂದ ಸತ್ತರು. ಸದ್ಯಕ್ಕೆ ಅವರಿಗೆ 42 ಜೀವಂತ ಮಕ್ಕಳಿದ್ದಾರೆ. ಅಬ್ದುಲ್ ಮಜೀದ್ ಅವರ ಮಕ್ಕಳಲ್ಲಿ ಇಪ್ಪತ್ತೆರಡು ಹೆಣ್ಣುಮಕ್ಕಳು ಮತ್ತು ಇಪ್ಪತ್ತೆರಡು ಗಂಡು ಮಕ್ಕಳಾಗಿದ್ದಾರೆ. 2017 ರಲ್ಲಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ಜನಗಣತಿ ಪ್ರಾರಂಭವಾದಾಗ ಅತಿದೊಡ್ಡ ಕುಟುಂಬ ಮತ್ತು ಅದರ ಮುಖ್ಯಸ್ಥ ಅಬ್ದುಲ್ ಮಜೀದ್ ಮೆಂಗಲ್ ಬೆಳಕಿಗೆ ಬಂದಿದ್ದರು.
ಮೆಂಗಲ್ ಅವರ ಕುಟುಂಬದ ಗಾತ್ರ ಕಂಡು ಜನಗಣತಿ ಕಾರ್ಯಕರ್ತರು ದಿಗ್ಭ್ರಮೆಗೊಂಡಿದ್ದರು. ಈ ವೇಳೆ 100 ಮಕ್ಕಳಿಗೆ ತಂದೆಯಾಗುವ ಆಸೆಯನ್ನು ಮಜೀದ್ ವ್ಯಕ್ತಪಡಿಸಿದ್ದರು.‌ ಈ ಹಿಂದೆ ಕ್ವೆಟ್ಟಾದಲ್ಲಿ, ಜಾನ್ ಮುಹಮ್ಮದ್ ಎಂಬ ವ್ಯಕ್ತಿ 36 ಮಕ್ಕಳ ತಂದೆಯಾಗಿದ್ದ. ಮೆಂಗಲ್ ಅವರ ಕುಟುಂಬವು ಗಮನಕ್ಕೆ ಬರುವವರೆಗೂ ಆತನೇ ದೊಡ್ಡ ಕುಟುಂಬವನ್ನು ಹೊಂದಿದ್ದಾರೆಂದು ನಂಬಲಾಗಿತ್ತು.
ಅಬ್ದುಲ್ ಮಜೀದ್ ಮೆಂಗಲ್ ಅವರು ವೃತ್ತಿಯಲ್ಲಿ ಟ್ರಕ್ ಚಾಲಕರಾಗಿದ್ದರು. ಆತ ಕೇವಲ 18 ವರ್ಷ ವಯಸ್ಸಿನವನಾಗಿದ್ದಾಗ ತನ್ನ ಮೊದಲ ಹೆಂಡತಿಯನ್ನು ಮದುವೆಯಾಗಿದ್ದ. ನಂತರ ಇತರ ಐದು ಮಹಿಳೆಯರನ್ನು ಮದುವೆಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!