ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನವು ಈಗಾಗಲೇ ಭಾರತದ ಹಲವು ನಗರಗಳನ್ನು ಗುರಿಯಾಗಿಸಿ ದಾಳಿ ಮಾಡ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಕರಾಚಿ, ಸಿಯಾಲ್‌ಕೋಟ್, ಲಾಹೋರ್‌ನಲ್ಲಿ ಅಟ್ಯಾಕ್ ಮಾಡಿದ್ದು ಇದೀಗ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಸಂಪೂರ್ಣ ಛಿದ್ರಛಿದ್ರಗೊಂಡಿದೆ.
ಇದಕ್ಕೂ ಮೊದಲು ಭಾರತ ಲಾಹೋರ್‌ನಲ್ಲಿರುವ ಏರ್ ಡಿಫೆನ್ಸ್ ಸಿಸ್ಟಮ್ HQ-9 ಅನ್ನು ನಾಶಪಡಿಸಿತ್ತು. ಇದೀಗ ಭಾರತದ ಸೇನೆ ಪಾಕಿಸ್ತಾನದ ಮತ್ತೊಂದು ವಾಯು ರಕ್ಷಣಾ ನೆಲೆಯನ್ನು ನಾಶಪಡಿಸಿದೆ.
ಏರ್‌ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ (AWACS). ಇದು ಒಂದು ರೀತಿಯ ವಿಮಾನ. ಶತ್ರುಗಳ ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ದೂರದಲ್ಲೇ ಗುರುತಿಸಿ ಹೊಡೆಯುವ ಸಾಮರ್ಥ್ಯವಿರುವ ಅಸ್ತ್ರವಾಗಿದೆ.
ಈ ವ್ಯವಸ್ಥೆಯು ನೆಲದ ಮೇಲೆ ನಡೆಯುವ ಚಟುವಟಿಕೆಗಳನ್ನೂ ತಡೆಹಿಡಿಯುವ ಸಾಮರ್ಥ್ಯ ಹೊಂದಿತ್ತು. ಅದರ ದೊಡ್ಡ ಶಕ್ತಿ ಅಂದರೆ ಅದರಲ್ಲಿದ್ದ ರಾಡಾರ್ ವ್ಯವಸ್ಥೆ. ಇದು ನೂರಾರು ಕಿಲೋಮೀಟರ್‌ಗಳವರೆಗೆ ಶತ್ರುಗಳ ಚಟುವಟಿಕೆಗಳ ಮೇಲೆ ಕಣ್ಣಿಡುತ್ತಿತ್ತು, ಆದರೆ ಭಾರತವು S-400 ಮೂಲಕ ಪಾಕಿಸ್ತಾನದ AWACS ಉಡೀಸ್ ಮಾಡಿದೆ. ಈ ವ್ಯವಸ್ಥೆಯ ಧ್ವಂಸದಿಂದಾಗಿ ಪಾಕಿಸ್ತಾನಿ ವಾಯುಪಡೆಯ ದಾಳಿ ಸಾಮರ್ಥ್ಯಕ್ಕೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ.