ಜಗತ್ತಿನ ಅತಿ ಮಾಲಿನ್ಯದ ನದಿ ಪಾಕಿಸ್ತಾನದ ‘ರಾವಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿರುವ ರಾವಿ ನದಿಯು ಜಗತ್ತಿನಲ್ಲಿ ಅತಿ ಮಲಿನವಾಗಿರುವ ನದಿ ಎಂದು ಅಮೆರಿಕ ಮೂಲದ ಸಂಶೋಧನಾ ಅಕಾಡೆಮಿ ತಿಳಿಸಿದೆ. ವಿಶ್ವದಲ್ಲೇ ಅತ್ಯಂತ ಮಲಿನವಾಗಿರುವ ರಾವಿ ನದಿ ಸ್ಥಳೀಯರಿಗೆ ಗಂಭೀರ ಅಪಾಯ ತರುವ ಸಾಧ್ಯತೆ ಇದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ರಾವಿ ನದಿಗೂ ಮುನ್ನ ಬೊವಿಲಿಯಾ ಮತ್ತು ಇಥಿಯೋಪಿಯಾದಲ್ಲಿನ ಜಲಮೂಲಗಳು ಮಾಲಿನ್ಯಯುಕ್ತವಾಗಿದ್ದವು. ರಾವಿ ನದಿಯ ಮಾಲಿನ್ಯದಿಂದ ಈ ಪ್ರದೇಶಗಳಲ್ಲಿನ ಜನರು ಗಂಭೀರ ಆರೋಗ್ಯ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಯಾರ್ಕ್ ವಿಶ್ವವಿದ್ಯಾಲಯವು ಎಲ್ಲಾ ಖಂಡಗಳ 104 ದೇಶಗಳ 258 ನದಿಗಳ 1052 ಪ್ರದೇಶಗಳಲ್ಲಿ ಅಧ್ಯಯನ ನಡೆಸಿದೆ. ನದಿಗಳಲ್ಲಿ ಪ್ಯಾರಾಸಿಟಮಲ್, ನಿಕೋಟಿನ್, ಕೆಫೀನ್, ಎಪಿಲೆಪ್ಸಿ ಹಾಗೂ ಮಧುಮೇಹದ ಔಷಧಗಳ ತ್ಯಾಜ್ಯ ಕಂಡುವಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!