ಉಕ್ರೇನ್‌ ಬಿಕ್ಕಟ್ಟು: ಭಾರತೀಯರ ನೆರವಿಗೆ ಹೊಸ ಕಂಟ್ರೋಲ್‌ ರೂಂ, ಶೀಘ್ರ ವಿಮಾನ ವ್ಯವಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸಂಘರ್ಷ ತಾರಕಕ್ಕೆ ಏರುತ್ತಿದ್ದು, ಅಲ್ಲಿರುವ ಭಾರತೀಯರ ನೆರವಿಗೆ ಹಾಗೂ ಮಾಹಿತಿ ಒದಗಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಂದಾಗಿದೆ.
ಉಕ್ರೇನ್‌ ನಲ್ಲಿರುವ ಭಾರತೀಯರಿಗಾಗಿ ಹೊಸ ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದ್ದು, 24 ಗಂಟೆಗಳ ಕಾಲ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.
ಈಗಾಗಲೇ ಭಾರತ ಕೂಡ ತನ್ನ ಪ್ರಜೆಗಳಿಗೆ ತಾಯ್ನಾಡಿಗೆ ಮರಳುವಂತೆ ಸೂಚನೆ ನೀಡಿದ್ದು, ವಿಮಾನಗಳ ಸಂಚಾರದ ಬಗ್ಗೆ ಹೆಚ್ಚಿನ ಕರೆಗಳು ಬರುತ್ತಿವೆ. ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ ಶೀಘ್ರದಲ್ಲಿ ಸ್ವದೇಶಕ್ಕೆ ಕರೆತರುವ ಕೆಲಸ ಮಾಡಲಾಗುತ್ತದೆ ಎಂದು ಉಕ್ರೇನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಸದ್ಯ ಉಕ್ರೇನ್‌ ನಲ್ಲಿ ಅಂತಾರಾಷ್ಟ್ರೀಯ ಏರ್ ಲೈನ್ಸ್‌, ಏರ್‌ ಅರೇಬಿಯಾ, ಫ್ಲೈ ದುಬೈ ಸೇರಿ ಹಲವು ವಿಮಾನಗಳು ಹಾರಾಟ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಇನ್ನು ಉಕ್ರೇನ್‌ ನಲ್ಲಿರುವ ಭಾರತೀಯರ ನೆರವಿಗೆ ದೂ.+91 11 23012113, +91 11 23014104, +91 11 23017905 and 1800118797 (ಟೋಲ್ ಪ್ರೀ) ಇ- ಮೇಲ್ [email protected] ಹಾಗೂ ಭಾರತೀಯ ರಾಯಭಾರ ಕಚೇರಿ ದೂ. +380 997300428 +380 997300483, Email: [email protected]  ಸಂಪರ್ಕಿಸಲು ಅನುವು ಮಾಡಿಕೊಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!