ಸಂಜೆ ಸ್ನಾಕ್ಸ್‌, ಆರೋಗ್ಯಕ್ಕೆ ಹಿತಕರವಾದ ಪಾಲಕ್ ಫ್ರೂಟ್ ಸಲಾಡ್ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:
ಪಾಲಾಕ್: ಒಂದು ಕಟ್ಟು
ಸೇಬು: ಒಂದು, ಕಿತ್ತಳೆ: ಒಂದು,
ಪನೀರ್: ಕಾಲು ಕಪ್,
ಈರುಳ್ಳಿ: ಒಂದು,
ಬಾದಾಮಿ, ಗೋಡಂಬಿ, ಒಣದ್ರಾಕ್ಷಿ: ಕಾಲು ಕಪ್
ಪುದೀನ, ಕೊತ್ತಂಬರಿ: ಸ್ವಲ್ಪ,
ಆಲಿವ್ ಎಣ್ಣೆ: ಎರಡು ಚಮಚ,
ಜೇನುತುಪ್ಪ: ಒಂದು ಚಮಚ,
ಲವಂಗ: ಎರಡು,
ಕಾಳುಮೆಣಸಿನ ಪುಡಿ: ಕಾಲು ಚಮಚ,
ಉಪ್ಪು: ಸಾಕಷ್ಟು

ಮಾಡುವ ವಿಧಾನ: 

ಒಂದು ಪಾತ್ರೆಯಲ್ಲಿ ಆಲಿವ್ ಎಣ್ಣೆ, ಜೇನುತುಪ್ಪ, ಲವಂಗ, ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ. ಇನ್ನೊಂದು ಬಟ್ಟಲಿನಲ್ಲಿ ಪಾಲಾಕ್‌ ಎಲೆ, ಕತ್ತರಿಸಿದ ಸೇಬು, ಕಿತ್ತಳೆ, ಈರುಳ್ಳಿ ಮತ್ತು ಪನೀರ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಸಣ್ಣಗೆ ಕತ್ತರಿಸಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪುದೀನಾ ಮತ್ತು ಕೊತ್ತಂಬರಿ ಸೇರಿಸಿ. ಮೊದಲು ಕಲಸಿದ ಜೇನು ಮಿಶ್ರಣವನ್ನು ಸೇರಿಸಿ ಕಲಸಿದರೆ ‘ಪಾಲಕ್ ಫ್ರೂಟ್ ಸಲಾಡ್’ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!