June 7, 2026
Sunday, June 7, 2026
spot_img

FOOD | ಕೇವಲ 15 ನಿಮಿಷಗಳಲ್ಲಿ ರೆಡಿ ಆಗುತ್ತೆ ನೋಡಿ ಮಾವಿನಕಾಯಿ ಖಾರಾ: ರೆಸಿಪಿ ಇಲ್ಲಿದೆ

ಮಾವಿನಕಾಯಿ ಖಾರಾ ಅಥವಾ ಮಾವಿನಕಾಯಿ ತೊಕ್ಕು/ಚಟ್ನಿ ಉತ್ತರ ಕರ್ನಾಟಕದ ಹಾಗೂ ಹಳ್ಳಿ ಶೈಲಿಯ ಅತ್ಯಂತ ಜನಪ್ರಿಯ, ಬಾಯಿ ನೀರೂರಿಸುವ ಖಾದ್ಯವಾಗಿದೆ. ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಮತ್ತು ಈ ಖಾರವನ್ನು ಸೇರಿಸಿ ತಿಂದರೆ ಅದರ ರುಚಿಯೇ ಬೇರೆ! ಇದು ಚಪಾತಿ, ರೊಟ್ಟಿ ಹಾಗೂ ದೋಸೆಗೂ ಅತ್ಯುತ್ತಮ ಕಾಂಬಿನೇಷನ್.

ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ
ಅಚ್ಚ ಖಾರದ ಪುಡಿ
ಸಾಸಿವೆ
ಮೆಂತ್ಯ ಕಾಳು
ಬೆಳ್ಳುಳ್ಳಿ ಎಸಳುಗಳು
ಬೆಲ್ಲದ ಪುಡಿ
ಅರಿಶಿನ ಪುಡಿ
ಇಂಗು
ಉಪ್ಪು
ಅಡುಗೆ ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕದೆ ಮೆಂತ್ಯ ಕಾಳು ಮತ್ತು ಸಾಸಿವೆಯನ್ನು ಪ್ರತ್ಯೇಕವಾಗಿ ಲಘುವಾಗಿ ಕೆಂಪಗಾಗುವವರೆಗೆ ಹುರಿದುಕೊಂಡು. ಅದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ನಯವಾದ ಪುಡಿ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ತುರಿದ ಮಾವಿನಕಾಯಿಯನ್ನು ಹಾಕಿ, ಯಾವುದೇ ಎಣ್ಣೆ ಹಾಕದೆ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಚೆನ್ನಾಗಿ ಕೈಯಾಡಿಸಿ. ಮಾವಿನಕಾಯಿ ಮೃದುವಾಗಿ, ಅದರಲ್ಲಿದ್ದ ನೀರಿನಂಶ ಸಂಪೂರ್ಣವಾಗಿ ಆರಿಹೋಗಬೇಕು. ಬಳಿಕ ಉರಿಯನ್ನು ಪೂರ್ತಿ ಕಡಿಮೆ ಮಾಡಿ.

ನಂತರ ಬೆಂದ ಮಾವಿನಕಾಯಿ ತುರಿಗೆ ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಮತ್ತು ಮೊದಲೇ ಸಿದ್ಧಪಡಿಸಿದ ಮೆಂತ್ಯ-ಸಾಸಿವೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗಿ ಇಡೀ ಮಿಶ್ರಣವು ಗಟ್ಟಿಯಾಗುವಾಗ ಒಲೆಯನ್ನು ಆಫ್ ಮಾಡಬೇಕು ನಂತರ ಮತ್ತೊಂದು ಸಣ್ಣ ಕಾಡಾಯಿಯಲ್ಲಿ 4-5 ಚಮಚ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಬೆಳ್ಳುಳ್ಳಿ ತಿಳಿ ಚಿನ್ನದ ಬಣ್ಣ ಬರುವವರೆಗೆ ಹುರಿದು. ಈ ಬಿಸಿ ಒಗ್ಗರಣೆಯನ್ನು ನೇರವಾಗಿ ಮಾವಿನಕಾಯಿ ಮಿಶ್ರಣಕ್ಕೆ ಸುರಿದು ಚೆನ್ನಾಗಿ ಮಿಕ್ಸ್ ಮಾಡಿದರೆ ನಾಲಿಗೆಗೆ ರುಚಿ ನೀಡುವ ಮಾವಿನಕಾಯಿ ಖಾರಾ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !