September 30, 2026
Wednesday, September 30, 2026
spot_img

ಪಲ್ಯ, ಗ್ರೇವಿ & More 44 | ಬಸಳೆ ಸೊಪ್ಪಿನ ಸಾಂಬಾರ್ : ಕರಾವಳಿಯ ವಿಶೇಷ ರುಚಿ ಈಗ ನಿಮ್ಮ ಅಡುಗೆ ಮನೆಯಲ್ಲೇ

ಕರಾವಳಿ ಭಾಗದ ಅಡುಗೆಗಳಲ್ಲಿ ಸಾಂಬಾರ್‌ಗೂ ಒಂದು ವಿಶೇಷ ಸ್ಥಾನವಿದೆ. ಅದರಲ್ಲಿ ಬಸಳೆ ಸೊಪ್ಪಿನ ಸಾಂಬಾರ್ ಮನೆಮನೆಯಲ್ಲೂ ತಯಾರಾಗುತ್ತೆ. ಈ ಸಾಂಬಾರ್ ಅನ್ನ, ಪುಂಡಿ, ದೋಸೆ, ಶ್ಯಾವಿಗೆ ಜೊತೆಗೆ ಸವಿದರೆ ಮನೆಯಲ್ಲೇ ಕರಾವಳಿ ಊಟದ ಅನುಭವ ನಿಮಗಾಗೋದು ಖಂಡಿತ.

ಬೇಕಾಗುವ ಪದಾರ್ಥಗಳು:

ಬಸಳೆ ಸೊಪ್ಪು – 1 ಕಟ್ಟು
ತೊಗರಿಬೇಳೆ – 1 ಕಪ್
ಟೊಮ್ಯಾಟೋ – 1
ಈರುಳ್ಳಿ – 1
ಹಸಿಮೆಣಸು – 2
ಹುಣಸೆಹಣ್ಣು – ಚಿಕ್ಕ ಲಿಂಬೆ ಗಾತ್ರ
ಅರಿಶಿಣ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಾಂಬಾರ್ ಪುಡಿ – 1½ ಟೇಬಲ್ ಸ್ಪೂನ್

ಒಗ್ಗರಣೆಗೆ:

ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಒಣ ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಬೆಳ್ಳುಳ್ಳಿ – 4 ಎಸಳು

ಮಾಡುವ ವಿಧಾನ:

ಮೊದಲು ತೊಗರಿಬೇಳೆಯನ್ನು ತೊಳೆದು ಕುಕ್ಕರ್‌ನಲ್ಲಿ ಹಾಕಿ, ಅರಿಶಿಣ ಮತ್ತು ನೀರು ಹಾಕಿ 3-4 ವಿಶಿಲ್ ಬರುವವರೆಗೆ ಬೇಯಿಸಿ.

ಒಂದು ಪಾತ್ರೆಯಲ್ಲಿ ಬಸಳೆ ಸೊಪ್ಪು, ಈರುಳ್ಳಿ, ಟೊಮ್ಯಾಟೋ, ಹಸಿಮೆಣಸು ಸೇರಿಸಿ ಸ್ವಲ್ಪ ನೀರು ಹಾಕಿ ಬೇಯಿಸಿ. ಸೊಪ್ಪು ಮೃದುವಾದ ನಂತರ ಅದಕ್ಕೆ ಹುಣಸೆ ಹಣ್ಣಿನ ರಸ ಸೇರಿಸಿ ಕುದಿಯಲು ಬಿಡಿ.

ಈಗ ಬೇಯಿಸಿದ ಬೇಳೆ ಸೇರಿಸಿ ಚೆನ್ನಾಗಿ ಕಲಸಿ, ಸಾಂಬಾರ್ ಪುಡಿ ಮತ್ತು ಉಪ್ಪು ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ.

ಕೊನೆಯಲ್ಲಿ ಒಗ್ಗರಣೆಗೆ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಆದ ಮೇಲೆ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಗೂ ಬೆಳ್ಳುಳ್ಳಿ ಹಾಕಿ ಸಾಂಬಾರ್‌ಗೆ ಸೇರಿಸಿ.

ಬಿಸಿ ಬಸಳೆ ಸೊಪ್ಪಿನ ಸಾಂಬಾರ್ ಅನ್ನ ಅಥವಾ ಇಡ್ಲಿ ಜೊತೆಗೆ ಸವಿದರೆ ತುಂಬಾ ರುಚಿಯಾಗಿರುತ್ತದೆ!

Must Read