September 14, 2026
Monday, September 14, 2026
spot_img

ಪಲ್ಯ, ಗ್ರೇವಿ & More 69 | ಕರಾವಳಿ ಸ್ಟೈಲ್ ಸಿಹಿ-ಹುಳಿ ಮಾವಿನ ಹಣ್ಣಿನ ಸಾರು

ಮಾವಿನ ಹಣ್ಣಿನ ಸೀಸನ್ ಅಂದರೆ ಅಡುಗೆ ಮನೆಯಲ್ಲಿ ಹೊಸ ರುಚಿಗಳ ಹಬ್ಬ! ಅದರಲ್ಲಿ ಕರಾವಳಿ ಕರ್ನಾಟಕದ ಫೇವರಿಟ್ ಡಿಶ್ ಆಗಿರುವ ಮಾವಿನ ಹಣ್ಣಿನ ಸಾರು ವಿಶೇಷ ಸ್ಥಾನ ಪಡೆದಿದೆ. ಸಿಹಿ, ಹುಳಿ ಮತ್ತು ಸ್ವಲ್ಪ ಖಾರದ ಮಿಶ್ರಣದಿಂದ ಈ ಸಾರು ಅನ್ನದ ಜೊತೆ ತಿಂದರೆ ಊಟದ ರುಚಿಯೇ ಬದಲಾಗುತ್ತದೆ.

ಬೇಕಾಗುವ ಪದಾರ್ಥಗಳು

ಮಾಗಿದ ಮಾವಿನಹಣ್ಣು – 3-4
ಬೆಲ್ಲ – ರುಚಿಗೆ ತಕ್ಕಷ್ಟು
ತೆಂಗಿನಕಾಯಿ ತುರಿ – ½ ಕಪ್
ಒಣ ಮೆಣಸಿನಕಾಯಿ – 2-3
ಸಾಸಿವೆ – 1 ಚಮಚ
ಕೊತ್ತಂಬರಿ ಬೀಜ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – ಸ್ವಲ್ಪ

ಒಗ್ಗರಣೆಗೆ:

ಎಣ್ಣೆ – 1 ಚಮಚ
ಸಾಸಿವೆ – ½ ಚಮಚ
ಕರಿಬೇವು – ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಮಾವಿನಹಣ್ಣಿನ ಸಿಪ್ಪೆ ತೆಗೆದು ಸ್ವಲ್ಪ ಕಿವುಚಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ನೀರು ಮತ್ತು ಬೆಲ್ಲ ಸೇರಿಸಿ ಮೃದುವಾಗುವವರೆಗೆ ಕುದಿಸಿ.

ಈಗ ತೆಂಗಿನಕಾಯಿ ತುರಿ, ಒಣ ಮೆಣಸಿನಕಾಯಿ, ಸಾಸಿವೆ ಮತ್ತು ಕೊತ್ತಂಬರಿ ಬೀಜವನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
ಈ ಮಸಾಲೆ ಪೇಸ್ಟ್ ಅನ್ನು ಕುದಿಯುತ್ತಿರುವ ಮಾವಿನ ಮಿಶ್ರಣಕ್ಕೆ ಸೇರಿಸಿ. ಉಪ್ಪು ಹಾಕಿ 5-10 ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ.

ಕೊನೆಗೆ ಒಗ್ಗರಣೆ ತಯಾರಿಸಿ ಇದಕ್ಕೆ ಹಾಕಿ. ಬಿಸಿ ಅನ್ನದ ಜೊತೆ ಈ ಸಿಹಿ-ಹುಳಿ ಮಾವಿನ ಸಾರು ಸರ್ವ್ ಮಾಡಿದರೆ ಅದ್ಭುತ ರುಚಿ ಸಿಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !