July 25, 2026
Saturday, July 25, 2026
spot_img

ಪಲ್ಯ, ಗ್ರೇವಿ & More 74 | ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್ ಆಂಧ್ರ ಸ್ಟೈಲ್ ಗೊಂಗುರ ಪಚ್ಚಡಿ

ಹುಳಿ, ಖಾರ ಮತ್ತು ಸಖತ್ ರುಚಿ ಇರುವ ಆಂಧ್ರ ಶೈಲಿಯ ಗೊಂಗುರ ಪಚ್ಚಡಿ ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುವ ಸೈಡ್ ಡಿಶ್. ಬಿಸಿ ಅನ್ನ, ತುಪ್ಪ, ದೋಸೆ ಅಥವಾ ಚಪಾತಿ ಜೊತೆಯಲ್ಲೂ ಇದು ಅದ್ಭುತವಾಗಿ ಹೊಂದಿಕೊಳ್ಳುತ್ತೆ.

ಬೇಕಾಗುವ ಪದಾರ್ಥಗಳು:

ಗೊಂಗುರ ಎಲೆ – 2 ಕಪ್
ಒಣ ಮೆಣಸಿನಕಾಯಿ – 10 ರಿಂದ 15
ಕೊತ್ತಂಬರಿ ಬೀಜ – 1 ಚಮಚ
ಜೀರಿಗೆ – ಅರ್ಧ ಚಮಚ
ಮೆಂತ್ಯೆ – ಕಾಲು ಚಮಚ
ಬೆಳ್ಳುಳ್ಳಿ – 5 ರಿಂದ 6 ಎಸಳು
ಸಾಸಿವೆ – ಅರ್ಧ ಚಮಚ
ಉದ್ದಿನಬೇಳೆ – 1 ಚಮಚ
ಕಡಲೆಬೇಳೆ – 1 ಚಮಚ
ಇಂಗು – ಚಿಟಿಕೆ
ಎಳ್ಳೆಣ್ಣೆ – 4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಗೊಂಗುರ ಎಲೆಗಳನ್ನು ಚೆನ್ನಾಗಿ ತೊಳೆದು ಒಣಗಿಸಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಲೆಗಳನ್ನು ಮೃದುವಾಗುವವರೆಗೆ ಹುರಿದು ಪಕ್ಕಕ್ಕಿಡಿ.

ಅದೇ ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತ್ಯೆ ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ. ಇವು ತಣ್ಣಗಾದ ಬಳಿಕ ಹುರಿದ ಗೊಂಗುರ ಎಲೆ, ಉಪ್ಪು ಮತ್ತು ಬೆಳ್ಳುಳ್ಳಿ ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ.

ಕೊನೆಯಲ್ಲಿ ಬಾಣಲೆಯಲ್ಲಿ ಎಳ್ಳೆಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸು, ಬೆಳ್ಳುಳ್ಳಿ ಹಾಗೂ ಇಂಗು ಹಾಕಿ ಒಗ್ಗರಣೆ ತಯಾರಿಸಿ. ಈ ಒಗ್ಗರಣೆಯನ್ನು ರುಬ್ಬಿದ ಪಚ್ಚಡಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಗೊಂಗುರ ಪಚ್ಚಡಿ ಸವಿಯಲು ಸಿದ್ಧ. ಬಿಸಿ ಅನ್ನಕ್ಕೆ ತುಪ್ಪ ಜೊತೆ ಇದ್ರೆ ಊಟ ಡಬಲ್ ಮಜಾ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !