June 23, 2026
Tuesday, June 23, 2026
spot_img

ಪಲ್ಯ, ಗ್ರೇವಿ & More 84 | ಅಬ್ಬಾ! ಏನ್ ರುಚಿ ಈ ಬದನೆಕಾಯಿ ಮಸಾಲೆ ಗ್ರೇವಿ

ಬದನೆಕಾಯಿ ಮಸಾಲೆ ಗ್ರೇವಿ ಚಪಾತಿ, ರೊಟ್ಟಿ ಮತ್ತು ಅನ್ನಕ್ಕೆ ಸೂಪರ್ ಟೇಸ್ಟಿ ಸೈಡ್ ಡಿಶ್. ಶೇಂಗಾ ಮತ್ತು ಕೊಬ್ಬರಿ ಮಿಶ್ರಿತ ಮಸಾಲೆಯಿಂದ ಈ ಗ್ರೇವಿ ಬಹಳ ರುಚಿಯಾಗಿರುತ್ತದೆ. ಇದು 30 ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು

ಸಣ್ಣ ಬದನೆಕಾಯಿ – 4 ರಿಂದ 5
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದುದು)
ಟೊಮೆಟೊ – 1
ಶೇಂಗಾ – 2 ಟೇಬಲ್ ಸ್ಪೂನ್ (ಹುರಿದದ್ದು)
ಒಣ ಕೊಬ್ಬರಿ – 2 ಟೇಬಲ್ ಸ್ಪೂನ್
ಹುಣಸೆಹಣ್ಣು – ಸ್ವಲ್ಪ
ಬೆಳ್ಳುಳ್ಳಿ – 4 ರಿಂದ 5 ಎಸಳು
ಶುಂಠಿ – ಸ್ವಲ್ಪ ತುಂಡು
ಖಾರದ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಅರಿಶಿನ – ಸ್ವಲ್ಪ
ಸಾಸಿವೆ – 1/2 ಟೀ ಸ್ಪೂನ್
ಜೀರಿಗೆ – 1/2 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಎಣ್ಣೆ – ಅಗತ್ಯವಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಬದನೆಕಾಯಿಗಳನ್ನು ಚೆನ್ನಾಗಿ ತೊಳೆದು, ನಾಲ್ಕು ಭಾಗವಾಗಿ ಸೀಳಿ. ಉಪ್ಪು ನೀರಿನಲ್ಲಿ 5 ನಿಮಿಷ ಇಡಿ

ಮಿಕ್ಸಿ ಜಾರ್‌ನಲ್ಲಿ ಹುರಿದ ಶೇಂಗಾ, ಒಣ ಕೊಬ್ಬರಿ, ಹುಣಸೆಹಣ್ಣು, ಬೆಳ್ಳುಳ್ಳಿ, ಶುಂಠಿ, ಖಾರದ ಪುಡಿ, ಧನಿಯಾ ಪುಡಿ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬದನೆಕಾಯಿಗಳನ್ನು ಹಾಕಿ 5–7 ನಿಮಿಷ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಹುರಿದು ತೆಗೆದು ಇಡಿ.

ಅದೇ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ. ನಂತರ ಈರುಳ್ಳಿ ಹಾಕಿ ಗೋಲ್ಡನ್ ಆಗುವವರೆಗೆ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.

ರುಬ್ಬಿದ ಮಸಾಲೆ ಮಿಶ್ರಣ, ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ. ಎಣ್ಣೆ ಬಿಡುವವರೆಗೆ ಬೇಯಿಸಿ.

ಅಗತ್ಯವಿರುವಷ್ಟು ನೀರು ಸೇರಿಸಿ ಕುದಿಯಲು ಬಿಡಿ. ನಂತರ ಹುರಿದ ಬದನೆಕಾಯಿ ಹಾಕಿ ಮುಚ್ಚಳ ಮುಚ್ಚಿ 5–10 ನಿಮಿಷ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !