May 29, 2026
Friday, May 29, 2026
spot_img

ಪಲ್ಯ, ಗ್ರೇವಿ & More 99 | ಇಡ್ಲಿ-ದೋಸೆಗೆ ಕಾಯಿ ಚಟ್ನಿ ತಿಂದು ಬೇಜಾರಾಗಿದೆಯೇ? ಹಾಗಿದ್ರೆ ಈ ಸ್ಪೈಸಿ ಟೊಮೆಟೊ ಖಾರ ಚಟ್ನಿ ಟ್ರೈ ಮಾಡಿ

ಟೊಮೆಟೊ ಖಾರ ಚಟ್ನಿ ಎಂಬುದು ದಕ್ಷಿಣ ಭಾರತದ, ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದ ಮನೆಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಸಾಂಪ್ರದಾಯಿಕ ಚಟ್ನಿಯಾಗಿದೆ. ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಾದ ತಟ್ಟೆ ಇಡ್ಲಿ, ಮಸಾಲೆ ದೋಸೆ, ಕರಕುರಾದ ರವೆ ದೋಸೆ ಅಥವಾ ಬಿಸಿಬಿಸಿ ಪಡ್ಡು ಜೊತೆಗೆ ಈ ಚಟ್ನಿ ಅತ್ಯುತ್ತಮ ಕಾಂಬಿನೇಷನ್ ಆಗಿದೆ.

ಬೇಕಾಗುವ ಸಾಮಗ್ರಿಗಳು:

ಟೊಮೆಟೊ
ಈರುಳ್ಳಿ
ಒಣ ಮೆಣಸಿನಕಾಯಿ
ಬೆಳ್ಳುಳ್ಳಿ
ಕಡಲೆ ಬೇಳೆ
ಉದ್ದಿನ ಬೇಳೆ
ಎಣ್ಣೆ
ಸಾಸಿವೆ
ಕರಿಬೇವು
ಇಂಗು
ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಮೊದಲು ಒಂದು ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಕಡಲೆ ಬೇಳೆ, ಉದ್ದಿನ ಬೇಳೆ ಮತ್ತು ಒಣ ಮೆಣಸಿನಕಾಯಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಾಗುವವರೆಗೆ ಹುರಿಯಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ ಮತ್ತು ಹೆಚ್ಚಿದ ಈರುಳ್ಳಿ ಸೇರಿಸಿ, ಈರುಳ್ಳಿ ಮೃದುವಾಗುವವರೆಗೆ ಹುರಿದುಕೊಂಡು. ಹೆಚ್ಚಿದ ಟೊಮೆಟೊ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ. ಟೊಮೆಟೊ ಪೂರ್ತಿ ಮೆತ್ತಗಾಗಿ, ಎಣ್ಣೆ ಬಿಡುವವರೆಗೆ ಮುಚ್ಚಳ ಮುಚ್ಚಿ ಬೇಯಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣವನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಬೇಕು. ನಂತರ ತಣ್ಣಗಾದ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ. ನೀರು ಹಾಕದೆ ನಯವಾಗಿ ರುಬ್ಬಿಕೊಳ್ಳಬೇಕು. ಬಳಿ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ. ಸಾಸಿವೆ, ಕರಿಬೇವು ಮತ್ತು ಇಂಗು ಹಾಕಿ ಸಿಡಿಸಿದ. ಈ ಒಗ್ಗರಣೆಯನ್ನು ರುಬ್ಬಿದ ಚಟ್ನಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಬಿಸಿಬಿಸಿಯಾದ ಇಡ್ಲಿ ಅಥವಾ ಕ್ರಿಸ್ಪಿ ದೋಸೆಯೊಂದಿಗೆ ಸವಿಯಲು ಟೊಮೆಟೊ ಖಾರ ಚಟ್ನಿ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !