ಚೆಕ್ ಪೊಸ್ಟ್ ನಲ್ಲಿ ತಪಾಸಣೆ ವೇಳೆ 59 ಲಕ್ಷಕ್ಕೂ ಅಧಿಕ ಮೌಲ್ಯದ ಪಾನ್ ಮಸಾಲಾ ವಸ್ತುಗಳು ಜಪ್ತಿ

ಹೊಸದಿಗಂತ , ಬೀದರ್:

ಹುಲಸೂರು ತಾಲೂಕಿನ ಅಂಬೇವಾಡಿ ಚೆಕ್ ಪೊಸ್ಟ್ ನಲ್ಲಿ ಸುಮಾರು ರೂ.59 ಲಕ್ಷ ಕ್ಕೂ ಅಧಿಕ ಮೌಲ್ಯದ ಕಚ್ಚಾ ಪಾನ್ ಮಸಾಲಾ, ತಂಬಾಕು, ಅಡಿಕೆ ಹಾಗೂ ಮೂರು ವಾಹನ ಜಪ್ತಿ ಮಾಡಲಾಗಿದೆ.

ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಹುಲಸೂರು ಪೋಲಿಸ್ ಠಾಣೆ ಪಿಎಸ್ಐ ನಾಗೇಂದ್ರ ರವರು ತಿಳಿಸಿದರು. ಸೋಮವಾರ ಸಾಯಂಕಾಲ ಹುಲಸೂರ್ ಕಡೆಯಿಂದ ಬರುತ್ತಿದ್ದ ಎರಡು ಕಂಟೇನರ್ ಹಾಗೂ ಒಂದು ಗೂಡ್ಸ್ ವಾಹನ ಒಂದರಲ್ಲಿ ಅನುಮಾನಾಸ್ಪದ ಕಂಡು ಬಂದ ಚೀಲಗಳನ್ನು ಪೊಲೀಸರು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ವಾಹನದಲ್ಲಿ ಒಟ್ಟು 4404 ಕೆಜಿ ಪಾನ್ ಮಸಾಲ ತಯಾರಿಸಲು ಬಳಸುವ ಕಚ್ಚಾ ಮಸಾಲಾ.ಅಡಿಕೆ ಚೂರುಗಳು. ತಂಬಾಕು ಹಾಗೂ ಕೆಮಿಕಲ್ ಪೌಡರ್ ಪತ್ತೆಯಾಗಿದೆ. ಈ ಸಂಬಂಧ ಹುಲಸೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!