100 ಕೋಟಿ ಮಂದಿಯ ಮನ ತಲುಪಿತು ಪ್ರಧಾನಿ ಮೋದಿಯ ಮನ್ ಕಿ ಬಾತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್‌ಗೆ 100ರ ಸಂಭ್ರಮ. ಈಗಾಗಲೇ 99 ಕಂತುಗಳು ಪ್ರಸಾರವಾಗಿರುವ ಈ ಕಾರ್ಯಕ್ರಮ ಈ ತಿಂಗಳು 100ನೇ ಸಂಭ್ರಮದ ಕಂತು ಪ್ರಸಾರವಾಗಲಿದೆ.

ಇದರ ನಡುವೆ ಪ್ರಸಾರ ಭಾರತಿ ಹಾಗೂ ಇಂಡಿಯನ್ ಇನ್ಸಿಟಿಟ್ಯೂಟ್ ಮ್ಯಾನೇಜ್ಮೆಂಟ್(IIM) ಮನ್ ಕಿ ಬಾತ್ ಕುರಿತು ಸಮೀಕ್ಷೆ ನಡೆಸಿದೆ.
ಈ ಸಮೀಕ್ಷಾ ವರದಿ ಪ್ರಕಾರ, ಮನ್ ಕಿ ಬಾತ್ ಕಾರ್ಯಕ್ರವನ್ನು ಈವರೆಗೆ 100 ಕೋಟಿ ಮಂದಿ ಆಲಿಸಿದ್ದಾರೆ. ಪ್ರತಿ ಕಂತು ಪ್ರಸಾರವಾದಾಗ 23 ಕೋಟಿ ಮಂದಿ ಆಲಿಸುತ್ತಾರೆ ಎಂದು ಹೇಳಿವೆ.

ಇನ್ನು ಮನ್ ಕಿ ಬಾತ್ ಕಾರ್ಯಕ್ರಮದ ಕುರಿತು ಭಾರತದ ಶೇಕಡಾ 96 ರಷ್ಟು ಮಂದಿಗೆ ಅರಿವಿದೆ. ಶೇಕಡಾ 73ರಷ್ಟು ಮಂದಿ ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮನ್ ಕಿ ಬಾತ್ ಆಲಿಸುವ ಜನರಲ್ಲಿ ಶೇಕಡಾ 59 ರಷ್ಟು ಮಂದಿಗೆ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದಿದ್ದಾರೆ. ಇನ್ನು ಶೇಕಡಾ 58 ರಷ್ಟು ಮಂದಿ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸುವ ಮೂಲಕ ನಮ್ಮ ಬುದುಕು ಬದಲಾಗಿದೆ ಎಂದಿದ್ದಾರೆ.

ಅದೇ ರೀತಿ ಶೇಕಡಾ 63 ರಷ್ಟು ಮಂದಿ ಸರ್ಕಾರದ ಕುರಿತು ಪಾಸಿಟೀವ್ ವ್ಯಕ್ತಪಡಿಸಿದ್ದಾರೆ. ಇನ್ನು ಮನ್ ಕಿ ಬಾತ್ ಆಲಿಸಿದ ಬಳಿಕ ಶೇಕಡಾ 60 ರಷ್ಟ ದೇಶ ಕಟ್ಟುವ ಮಹತ್ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾರೆ.

ಶೇಕಡಾ 44.7 ರಷ್ಟು ಜನ ಟಿವಿಯಲ್ಲಿ ನೋಡಲು ಬಯಸುತ್ತಾರೆ. ಶೇಕಡಾ 37.6 ರಷ್ಟು ಮಂದಿ ಮೊಬೈಲ್ ಮೂಲಕ ಮನ್ ಕಿ ಬಾತ್ ಆಲಿಸಲು ಬಯಸುತ್ತಾರೆ. 19 ರಿಂದ 34 ವಯಸ್ಸಿನ ಜನರಲ್ಲಿ ಶೇಕಡಾ 62 ರಷ್ಟು ಮಂದಿ ಟಿವಿಯಲ್ಲಿ ಮನ್ ಕಿ ಬಾತ್ ನೋಡಲು ಬಯಸುತ್ತಾರೆ.

ಮುಖ್ಯವಾಗಿ ಪ್ರಧಾನಿ ಮೋದಿ ಧ್ವನಿಯಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಆಲಿಸಲು ಬಹುತೇಕರು ಇಷ್ಟಪಡುತ್ತಾರೆ. ಹೀಗಾಗಿ ಹಿಂದಿಯಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಆಲಿಸುವರ ಸಂಖ್ಯೆ ಶೇಕಡಾ 65. ಇನ್ನು ಇಂಗ್ಲೀಷ್‌ನಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಆಲಿಸುವವರ ಸಂಖ್ಯೆ ಶೇಕಡಾ 18.

ಈ ವಿವರದ ಕುರಿತು ಮಾತನಾಡಿದ ಐಐಎಂ ನಿರ್ದೇಶಕ ಧೀರಜ್ ಶರ್ಮಾ, 10003 ಮಾದರಿ ವ್ಯಕ್ತಿಗಳ ಅಭಿಪ್ರಾಯ ಆಲಿಸಿ ಸಮೀಕ್ಷೆ ನಡೆಸಲಾಗಿದೆ. ಶೇಕಡಾ 60 ರಷ್ಟು ಪುರುಷರು ಹಾಗೂ ಶೇಕಡಾ 40 ರಷ್ಟ ಮಹಿಳೆಯರು. ಶೇಕಡಾ 64 ರಷ್ಟು ಮಂದಿ ಉದ್ಯೋಗಿಗಳು, ಶೇಕಡಾ 23 ರಷ್ಟು ಮಂದಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ದಾಖಲಿಸಲಾಗಿದೆ ಎಂದಿದ್ದಾರೆ. ದೇಶದ ಎಲ್ಲಾ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!