October 14, 2026
Wednesday, October 14, 2026
spot_img

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ, ಯೋಗಪಟು ಪಾಂಡುರಂಗಶೆಟ್ಟಿ ನಿಧನ

ಹೊಸದಿಗಂತ ವರದಿ ತಿಪಟೂರು:

ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಸಕ್ರಿಯ ಕಾರ್ಯಕರ್ತರಾಗಿ ಸುಮಾರು 60 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯೋಗ ಪಟು ಪಾಂಡುರಂಗಶೆಟ್ಟಿ ಎನ್.ಎಸ್. (88) ಅವರು ವಯೋಸಹಜ ಕಾರಣಗಳಿಂದ ಮಂಗಳವಾರ ಮಧ್ಯಾಹ್ನ 3 ಗಂಟೆಯಲ್ಲಿ ನಿಧನರಾಗಿದ್ದಾರೆ.

ತಿಪಟೂರು ನಗರದ ಹೊಸಪೇಟೆ ಬಡಾವಣೆಯಲ್ಲಿ ವಾಸವಾಗಿದ್ದ ಪಾಂಡುರಂಗಶೆಟ್ಟಿ ಅವರು ಯೋಗ ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆರ್‍ಎಸ್‍ಎಸ್‍ನೊಂದಿಗೆ ದೀರ್ಘಕಾಲದಿಂದ ನಿಕಟವಾಗಿ ಕಾರ್ಯನಿರ್ವಹಿಸಿದ್ದ ಅವರು, ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯೋಗ ಶಿಕ್ಷಣ ಕೇಂದ್ರದ ಪದಾಧಿಕಾರಿಗಳು, ಆರ್‍ಎಸ್‍ಎಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ನಗರದ ಹಿಂದೂ ರುದ್ರಭೂಮಿಯಲ್ಲಿ ಬೆಳಗ್ಗೆ 9.00 ಗಂಟೆಗೆ ಅಂತ್ಯಕ್ರೀಯೆ ನೇರವೇರಲಿದೆ.

Must Read