Tuesday, October 3, 2023

Latest Posts

ಬಾಯಿ ಚಪ್ಪರಿಸಿ ತಿನ್ನುವ ಪಾನಿಪುರಿಗೆ ಎಷ್ಟು ಬಗೆಯ ಹೆಸರುಗಳಿವೆ ಎಂದು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾನಿ ಪುರಿ.. ಭಾರತದ ಸಾರ್ವಕಾಲಿಕ ನೆಚ್ಚಿನ ಬೀದಿ ಆಹಾರ. ತಯಾರಿಸುವ ವಿಧಾನದಲ್ಲಿ ಸಣ್ಣಪುಟ್ಟ ಬದಲಾವಣೆಗಳಿದ್ದರೂ ದೇಶದ ಹಲವು ಭಾಗಗಳಲ್ಲಿ ಪಾನಿ ಪುರಿಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಅತ್ಯಂತ ಜನಪ್ರಿಯ ಪಾನಿ ಪುರಿಗಿರುವ ಹೆಸರುಗಳು ಯಾವುವು ಎಂದು ನಿಮಗೆ ಗೊತ್ತಾ? ಗೊತ್ತಿಲ್ಲ ಅಂದ್ರೆ ಇಲ್ಲಿ ಓದಿ..

ದೆಹಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಪಾನಿ ಪುರಿಯನ್ನು ʻಗೋಲ್ ಗಪ್ಪʼ ಎಂದು ಕರೆಯಲಾಗುತ್ತದೆ. ಇದನ್ನು ಆಲೂ, ಕಡಲೆ ಮತ್ತು ಚಟ್ನಿಯೊಂದಿಗೆ ತಯಾರಿಸಲಾಗುತ್ತದೆ. ಅವುಗಳನ್ನು ಮಸಾಲೆಭರಿತ ನೀರಿನಲ್ಲಿ ಅದ್ದಿ ಬಡಿಸಲಾಗುತ್ತದೆ.

ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ʻಪುಚ್ಕಾʼ ಎಂದು ಕರೆಯಲಾಗುತ್ತದೆ. ಬೇಯಿಸಿದ ಹಿಸುಕಿದ ಆಲೂಗಡ್ಡೆಗಳ ಮಿಶ್ರಣದಿಂದ ಪುಚ್ಕಾವನ್ನು ತಯಾರಿಸಲಾಗುತ್ತದೆ. ಚಟ್ನಿ ಕೂಡ ನಯವಾಗಿರುತ್ತದೆ. ಸಾಮಾನ್ಯ ಪೂರಿಗಿಂತ ಭಿನ್ನವಾಗಿ, ಪುರಿ ಸ್ವಲ್ಪ ದೊಡ್ಡದಾಗಿರುತ್ತದೆ. ಈ ಪೂರಿಯನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ.

ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ನೇಪಾಳದಲ್ಲಿ ಇದನ್ನು ʻಪಾನಿ ಪುರಿʼ ಎಂದು ಕರೆಯಲಾಗುತ್ತದೆ. ಆಲೂ, ಕಡಲೆ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕ್ಯಾರೆಟ್‌, ಮತ್ತು ಚಾಟ್ ಮಸಾಲಾದೊಂದಿಗೆ ಸಿಹಿ ಮತ್ತು ಮಸಾಲೆಯುಕ್ತ ನೀರಿನಲ್ಲಿ ನೀಡಿ ಸರ್ವ್‌ ಮಾಡುತ್ತಾರೆ. ಮುಂಬೈನಲ್ಲಿ ʻರಗ್ದಾʼ ಎಂತಲೂ ಕರೆಯುತ್ತಾರೆ. ಸಿಹಿ ಹಾಗೂ ಹುಣಸೆಹಣ್ಣಿನ ಚಟ್ನಿಯೊಂದಿಗೆ ಪಾನಿ ಪುರಿಯಾಗಿ ಬಡಿಸಲಾಗುತ್ತದೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಪಾನಿ ಪುರಿ ʻಪಕೋಡಿʼ ಎಂದೂ ಕರೆಯುತ್ತಾರೆ. ನಾವು ಸಾಮಾನ್ಯವಾಗಿ ಮಾಡುವ ಪಕೋಡಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹಸಿರು ಮೆಣಸಿನಕಾಯಿ ಮತ್ತು ಪುದೀನಾ ಪೇಸ್ಟ್ ಅನ್ನು ನೀರಿನಲ್ಲಿ ಬೆರೆಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಸೇವ್ ಕೂಡ ಸೇರಿಸಲಾಗುತ್ತದೆ.

ಒಡಿಶಾ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಹೈದರಾಬಾದ್ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಪಾನಿ ಪುರಿಯನ್ನು ʻಗಪ್ ಚುಪ್ʼ ಎಂದು ಕರೆಯಲಾಗುತ್ತದೆ. ಬಿಳಿ ಅವರೆಕಾಳು, ಅಥವಾ ಕಡಲೆಗಳನ್ನು ಮಸಾಲೆಯುಕ್ತ ನೀರು, ಬೇಯಿಸಿದ ಆಲೂಗಡ್ಡೆಗಳೊಂದಿಗೆ ಸ್ಟಫಿಂಗ್ಗೆ ಸೇರಿಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಅವರನ್ನು ʻಪಾನಿಕೆ ಪಟಾಶೆʼ ಎಂದು ಕರೆಯಲಾಗುತ್ತದೆ. ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಪಾನಿ ಪುರಿಯನ್ನು ʻಟಿಕ್ಕಿʼ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ತಿನ್ನುವ ಟಿಕ್ಕಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಟಿಕ್ಕಿಗಳ ಪೂರಿಗಳು ಚಿಕ್ಕವು.

ಎಲ್ಲರೂ ಇಷ್ಟಪಟ್ಟು ತಿನ್ನುವ ಪಾನಿ ಪೂರಿ ಮತ್ತು ಅವುಗಳಿಗಾಗಿ ತಯಾರಿಸಿದ ಮಸಾಲೆಯಲ್ಲಿ ಕೆಲವು ವ್ಯತ್ಯಾಸಗಳಿವೆ. ಹೆಸರುಗಳು ಸಹ ವಿಭಿನ್ನವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!