ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಖ್ಯಾತ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಆಟಗಾರ ಪಂಕಜ್ ಆಡ್ವಾಣಿ 26ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಸೌರವ್ ಕೊಥಾರಿಯನ್ನು ಸೋಲಿಸುವ ಮೂಲಕ ದಾಖಲೆಯ 26ನೇ ಬಾರಿಗೆ ಕರ್ನಾಟಕದ ಬೆಂಗಳೂರಿನ ಪಂಕಜ್ ಆಡ್ವಾಣಿ ಪ್ರಶಸ್ತಿ ಗೆದ್ದರು.
ಫೈನಲ್‌ನಲ್ಲಿ ಪಂಕಜ್ ಆಡ್ವಾಣಿ 1000-416 ರಿಂದ ಸೌರವ್ ಕೊಥಾರಿಯನ್ನು ಸೋಲಿಸಿದರು. ಅವರು 2005 ರಲ್ಲಿ ಈ ಸ್ಪರ್ಧೆಯಲ್ಲಿ ತಮ್ಮ ಮೊದಲ ವಿಶ್ವ ಪ್ರಶಸ್ತಿಯನ್ನು ಗೆದ್ದಿದ್ದರು. ಅಡ್ವಾಣಿ ಅವರು ಒಂಬತ್ತನೇ ಬಾರಿಗೆ ‘ಲಾಂಗ್ ಫಾರ್ಮ್ಯಾಟ್’ ಗೆಲುವು ಕಂಡಿದ್ದಾರೆ. ಅವರು ಎಂಟು ಸಂದರ್ಭಗಳಲ್ಲಿ ‘ಪಾಯಿಂಟ್ ಫಾರ್ಮ್ಯಾಟ್’ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದರು, ಜೊತೆಗೆ ಒಮ್ಮೆ ವಿಶ್ವ ಟೀಮ್ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ ಜಯಿಸಿದ್ದಾರೆ.