‘ಮಹಾ’ ರಾಜ್ಯಪಾಲರು ಅಮೆಜಾನ್ ಮೂಲಕ ಕೇಂದ್ರ ಸರಕಾರ ಕಳುಹಿಸಿದ ಪಾರ್ಸೆಲ್: ಉದ್ಧವ್ ಠಾಕ್ರೆ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಶಿವಾಜಿಯ ಕುರಿತು ಹೇಳಿಕೆ ನೀಡಿದ್ದ ಕೊಶ್ಯಾರಿ ಕುರಿತು ಮಾತನಾಡಿದ ಠಾಕ್ರೆ, ‘ಅವರು ಅಮೆಜಾನ್ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲಾದ ಪಾರ್ಸೆಲ್’ ಎಂದಿದ್ದಾರೆ.

ಈ ಗವರ್ನರ್ ಅನ್ನು ಅಮೆಜಾನ್ ಮೂಲಕ ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಕಳುಹಿಸಿದೆ, ಅವರು ಎರಡರಿಂದ ಐದು ದಿನಗಳಲ್ಲಿ ಅವರನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ಅಥವಾ ಬಂದ್ ಅನ್ನು ಆಯೋಜಿಸಲಾಗುವುದು ಎಂದು ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡುವುದೇನೆಂದರೆ, ನೀವು ಇಲ್ಲಿಗೆ ಕಳುಹಿಸಿದ ಮಾದರಿಯನ್ನು ತೆಗೆದುಕೊಂಡು ಹೋಗು ಬೇಕು.ಬೇಕಾದರೆ ಅವರನ್ನು ವೃದ್ಧಾಶ್ರಮದಲ್ಲಿ ಇರಿಸಿ, ನಮಗೆ ರಾಜ್ಯಕ್ಕೆ ಅಗತ್ಯವಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಕುರಿತು ರಾಜ್ಯಪಾಲ ಕೊಶ್ಯಾರಿ ಅವರ ಹೇಳಿಕೆಗಳಿಗೆ ಮಹಾರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆಡಳಿತಾರೂಢ ಏಕನಾಥ್ ಶಿಂಧೆ ಸೇನೆ ಮತ್ತು ಅದರ ಮಿತ್ರಪಕ್ಷ ಬಿಜೆಪಿಯ ನಾಯಕರು ಕೂಡ ಕೊಶ್ಯಾರಿ ಹೇಳಿಕೆ ಖಂಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!