Wednesday, December 6, 2023

Latest Posts

`ಕಾಂತಾರ’ ಸಿನಿಮಾಗೆ ಗೋವಾ ಸಿಎಂ ಮೆಚ್ಚುಗೆ: ರಿಷಬ್ ಅನ್ನು ಭೇಟಿಯಾದ ಪ್ರಮೋದ್ ಸಾವಂತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ `ಕಾಂತಾರ’ ಚಿತ್ರಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಮೆಚ್ಚುಗೆ ಸೂಚಿಸಿದ್ದಾರೆ.

ಕಾಂತಾರ’ ಸಿನಿಮಾ ನೋಡಿ, ರಿಷಬ್ ಅವರನ್ನ ಗೋವಾ ಸಿಎಂ ಭೇಟಿಯಾಗಿ, ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ.

ಕಾಂತಾರ ಸಿನಿಮಾ ಜನಮನ್ನಣೆ ಗಳಿಸಿದೆ. ವಿವಿಧ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ. ರಿಷಬ್ ಶೆಟ್ಟಿ ಮುಂದಿನ ಕೆಲಸಗಳಿಗೆ ಗೋವಾ ಸರ್ಕಾರದ ಬೆಂಬಲ ಸದಾ ಇದ್ದೇ ಇದೆ ಎಂದು ಪ್ರಮೋದ್ ಸಾವಂತ್ ಬೆಂಬಲ ಸೂಚಿಸಿದ್ದಾರೆ.

 

ಇನ್ನೂ ಐವತ್ತು ದಿನಗಳನ್ನು ಪೂರೈಸಿ, ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕಾಂತಾರ ಸಿನಿಮಾ ಈವರೆಗೂ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!