ಪೋಷಕರೇ ಜಾಗ್ರತೆ, ತ್ಯಾಜ್ಯ ತುಂಬಿದ ನೀರಿನ ತೊಟ್ಟಿಗೆ ಬಿದ್ದು ಕಂದಮ್ಮ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಡಿಶಾದಲ್ಲಿ ಮಗುವೊಂದು ತ್ಯಾಜ್ಯ ತುಂಬಿದ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ.

ಮಯೂರ್​ಭಂಜ್​ನಲ್ಲಿ ಮೋಚಿರಾಮ್​ ಎಂಬವರ 13 ತಿಂಗಳು ಗಂಡು ಮಗು ತ್ಯಾಜ್ಯ ತುಂಬಿದ ನೀರಿನತೊಟ್ಟಿಗೆ ಬಿದ್ದು ಮೃತಪಟ್ಟಿದೆ. ಕಂದಮ್ಮ  ಆಟವಾಡುತ್ತಾ ಮನೆಯ ಬಳಿ ಇರುವ ನೀರಿನ ತೊಟ್ಟಿಗೆ ಬಿದ್ದು ಪ್ರಾಣ ಬಿಟ್ಟಿದೆ.

ಮೋಚಿರಾಮ್​ ಅವರ ಪತ್ನಿ ಮನೆಕೆಲಸದಲ್ಲಿ ನಿರತರಾಗಿದ್ದಾಗ ಮಗು ಮನೆಯ ವರಾಂಡದಲ್ಲಿ ಆಟವಾಡುತ್ತಿತ್ತು. ಆಟವಾಡುತ್ತಾ ನೇರವಾಗಿ ಮನೆಯ ತ್ಯಾಜ್ಯ ತುಂಬಿದ್ದ ನೀರಿನ ತೊಟ್ಟಿಗೆ ಹೋಗಿ ಬಿದ್ದಿದೆ. ಕೊನೆಗೆ ಹುಡುಕಾಡಿದಾಗ ಮಗು ನೀರಿನ ಹೊಂಡದಲ್ಲಿ ಕಂಡಿದೆ. ಕೊನೆಗೆ ಆಸ್ಪತ್ರೆಗೆ ಸಾಗಿಸಲಾಗಿತ್ತಾದರು ಅಷ್ಟರಲ್ಲಿ ಮಗು ಮೃತಪಟ್ಟಿತ್ತು ಎನ್ನಲಾಗಿದೆ.

ಪೋಷಕರೇ ಮಕ್ಕಳಿರುವ ಮನೆಗಳಲ್ಲಿ ಬಾಗಿಲು ಹಾಕಿಕೊಳ್ಳಿ, ಮಕ್ಕಳ ಮೇಲೆ ಹೆಚ್ಚಿನ ಗಮನ ಇರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!