ಅರಕಲಗೂಡು ನಿವೇದಿತಾ ಶಾಲೆಯಲ್ಲಿ ಪೋಷಕರ ದಿನಾಚರಣೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಮಕ್ಕಳನ್ನು ವಿದ್ಯಾವಂತರನ್ನಷ್ಟೇ ಮಾಡಿದರೆ ಸಾಲದು, ಅವರನ್ನು ಸುಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕ-ಪೋಷಕರ ಮೇಲಿದೆ ಎಂದು ನಿವೇದಿತಾ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಂ.ರಾಗಿಣಿ ತಿಳಿಸಿದರು.

ಅರಕಲಗೂಡು ಪಟ್ಟಣದ ನಿವೇದಿತಾ ಶಾಲೆಯಲ್ಲಿ ಪೋಷಕರ ದಿನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಪೋಷಕರು ಮತ್ತು ಶಿಕ್ಷಕರ ಪರಸ್ಪರ ಸಹಕಾರ ಮಗುವಿನ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಸಹಾಕಾರಿಯಾಗಲಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಸವಿತಾ ಶ್ರೀಧರ್ ಅವರು ಹಲವಾರು ವರ್ಷಗಳಿಂದ ನಿವೇದಿತಾ ಶಾಲೆ ಬೆಳೆದು ಬಂದಿರುವ ಹಾದಿಯನ್ನು ನೋಡುತ್ತಿದ್ದೇನೆ, ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನೂ ಮಕ್ಕಳಲ್ಲಿ ನೀಡುತ್ತಾ ಬಂದಿದ್ದು, ಪ್ರಸ್ತುತ ಇಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ ಎಂಬುದು ಶ್ಲಾಘನೀಯ ವಿಷಯವಾಗಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಸುನಿತ ಮೋಹನ್ ಇವರು ಮಾತನಾಡಿ, ಶಿಕ್ಷಣ ಮಕ್ಕಳಿಗೆ ಬದುಕು ಕಟ್ಟಿಕೊಡಬಹುದು ಆದರೆ ಸಂಸ್ಕಾರವೇ ಇಲ್ಲವಾದರೆ ಜೀವನ ಮೌಲ್ಯಗಳನ್ನು ಕಂಡುಕೊಳ್ಳಲು ಸಾಧ್ಯವಾಗದು. ಈ ನಿಟ್ಟಿನಲ್ಲಿ ಶಾಲೆ ಉದಾತ್ತ ಉದ್ದೇಶಗಳ ಮೂಲಕ ಸ್ಪರ್ಧಾತ್ಮಕವಾಗಿ ತನ್ನ ಉದ್ದೇಶ ಗಳನ್ನು ಸಾಪಲ್ಯಗೊಳಿಸುವತ್ತ ಮುನ್ನಡೆದಿರುವುದನ್ನು ಶ್ಲಾಘಿಸಿ,ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಹಾಗೂ ಪೋಷಕರಿಗೆ ಉತ್ತೇಜನಕಾರಿಯಾಗಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!