ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬಾಕ್ಸರ್ ನಿಖತ್ ಜರೀನ್ ಮಹಿಳೆಯರ 50 ಕೆಜಿ ಬಾಕ್ಸಿಂಗ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡು ತಮ್ಮ ಅಭಿಯಾನವನ್ನು ಮುಗಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ 50 ಕೆಜಿ ಬಾಕ್ಸಿಂಗ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಖತ್ ಜರೀನ್ ಅವರು ಅಗ್ರ ಶ್ರೇಯಾಂಕ, ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು ವಿರುದ್ಧ 5-0 ಅಂತರದ ಹೀನಾಯ ಸೋಲು ಕಂಡರು. 32ರ ಘಟ್ಟದ ಪಂದ್ಯದಲ್ಲಿ ಜರೀನ್ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು 5-0 ಅಂತರದಿಂದ ಮಣಿಸಿ ಅಂತಿಮ 16ರ ಸುತ್ತಿಗೇರಿದ್ದರು. ಆದರೆ, ಈ ಸುತ್ತಿನಲ್ಲಿ ಇದೇ ಪ್ರಾಬಲ್ಯ ಮೆರೆಯುವಲ್ಲಿ ವಿಫಲರಾದರು. ಲವ್ಲಿನಾ ಮಾತ್ರ ಇನ್ನು ಭಾರತದ ಮಹಿಳಾ ಬಾಕ್ಸಿಂಗ್ ಪದಕ ಭರವಸೆ ಆಗಿದ್ದಾರೆ.