ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಮನು ಭಾಕರ್ ಅವರು ಮತ್ತೊಂದು ಇತಿಹಾಸ ಸೃಷ್ಟಿಸುವ ಅವಕಾಶ ಪಡೆದಿದ್ದಾರೆ.
10 ಎಂ ಏರ್ ಪಿಸ್ತೂಲ್ ಮಿಕ್ಸ್ಡ್ ಟೀಮ್ ಇವೆಂಟ್‌ನಲ್ಲಿ ಭಾರತದ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರು ಕಂಚಿನ ಪದಕದ ಸುತ್ತಿಗೆ ತೆರಳಿದ್ದು, ಮತ್ತೊಂದು ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.
ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರು 20 ಖಚಿತ ಶಾಟ್‌ಗಳ ಮೂಲಕ 580 ಪಾಯಿಂಟ್‌ಗಳನ್ನು ಗಳಿಸಿ 10 ಎಂ ಏರ್ ಪಿಸ್ತೂಲ್ ಮಿಕ್ಸ್ಡ್ ಟೀಮ್ ಇವೆಂಟ್‌ನ ಕಂಚಿನದ ಪದಕದ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮಂಗಳವಾರ ಅವರು ಕೊರಿಯಾದ ಕ್ಸುಯೆ ಲಿ ಹಾಗೂ ವೋನ್ಹೋ ಲೀ ಅವರ ಜತೆ ಸೆಣಸಾಟ ನಡೆಸಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿಯು ಭಾರತಕ್ಕೆ ಮತ್ತೊಂದು ಪದಕ ತಂದು ಕೊಡಲಿದ್ದಾರೆ. ಹಾಗಾಗಿ, ಎಲ್ಲರ ಗಮನವೀಗ ಮಂಗಳವಾರದ ಪಂದ್ಯದ ಮೇಲಿದೆ.