Paris Olympics | ಮೊದಲ ಎಸೆತದಲ್ಲೇ ನೀರಜ್‌ ಚೋಪ್ರಾ ಫೈನಲ್‌ಗೆ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್​ ಒಲಿಂಪಿಕ್ಸ್ ಟೂರ್ನಿಯಲ್ಲಿ ನೀರಜ್​ ಚೋಪ್ರಾ ಅವರು ಜಾವೆಲಿನ್​ ಅರ್ಹತಾ ಸುತ್ತಿನ ಪಂದ್ಯದಲ್ಲಿ 89.34 ಮೀ. ದೂರ ಜಾವೆಲಿನ್​ ಎಸೆದು ಫೈನಲ್​ ಪ್ರವೇಶಿಸಿದ್ದಾರೆ. ಆದರೆ ಭಾರತದ ಮತ್ತೋರ್ವ ಜಾವೆಲಿನ್‌ ಎಸೆತಗಾರ ಕಿಶೋರ್‌ ಜೇನಾ 9ನೇ ಸ್ಥಾನಿಯಾಗಿ ನಿರಾಸೆ ಮೂಡಿಸಿದರು.

‘ಬಿ’ ವಿಭಾಗದ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿದ ನೀರಜ್​ ತಮ್ಮ ಮೊದಲ ಎಸೆತವನ್ನೇ 89.34 ಮೀ. ದೂರ ಎಸೆದು ನೇರವಾಗಿ ಫೈನಲ್​ ಪ್ರವೇಶಿಸಿದರು. ಇವರ ಜತೆ ಪಾಕಿಸ್ತಾನದ ಅರ್ಷದ್ ನದೀಮ್ 86.59 ಮೀ. ಸಾಧನೆಯೊಂದಿಗೆ ಫೈನಲ್​ ಟಿಕೆಟ್​ ಪಡೆದರು.

89.34 ಮೀ. ದೂರ ಜಾವೆಲಿನ್​ ಎಸೆದದ್ದು ನೀರಜ್​ ಅವರ 2ನೇ ಶ್ರೇಷ್ಠ ಸಾಧನೆಯಾಗಿದೆ. ಅವರ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. ಟೋಕಿಯೊದಲ್ಲಿ 87.58 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದಿದ್ದರು. ಆಗಸ್ಟ್​ 8ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ನೀರಜ್​ ಚೋಪ್ರಾ ಚಿನ್ನದ ಪದಕ ಇರಾದೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ‘ಎ’ ವಿಭಾಗದಲ್ಲಿ ಜರ್ಮನಿಯ ಜೂಲಿಯನ್ ವೆಬರ್ 87.76 ಮೀ. ದೂರ ಎಸೆದು ಮೊದಲ ಸ್ಥಾನದೊಂದಿಗೆ ಫೈನಲ್​ ಪ್ರವೇಶಿಸಿದ್ದರು.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!