ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ಟೂರ್ನಿಯಲ್ಲಿ ಭಾರತ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ 50 ಕೆಜಿ ವಿಭಾಗದಲ್ಲಿ ಇಂದು ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನಿನ ಯ್ಯೂ ಸುಸುಕಿ ಎದುರು ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ರೋಚಕ ಕಾದಾಟದಲ್ಲಿ ಕೊನೆಯ ಕ್ಷಣದಲ್ಲಿ ತಂತ್ರಗಾರಿಗೆ ಮೆರೆದ ವಿನೇಶ್, ವಿಶ್ವ ನಂ.1 ಕುಸ್ತಿಪಟುವಿಗೆ ಶಾಕ್ ನೀಡುವ ಮೂಲಕ ಪವಾಡಸದೃಶ ರೀತಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಆರಂಭದಿಂದಲೇ ಜಪಾನಿನ ಯ್ಯೂ ಸುಸುಕಿ ಸಾಕಷ್ಟು ರಕ್ಷಣಾತ್ಮಕ ಆಟದ ಮೂಲಕ ವಿನೇಶ್‌ಗೆ ಅಂಕ ಗಳಿಸಲು ಅವಕಾಶ ಮಾಡಿಕೊಡಲಿಲ್ಲ. ಬಹುತೇಕ ಪಂದ್ಯ ಮುಕ್ತಾಯದ ಹಂತದ ವೇಳೆಗೆ ಜಪಾನಿನ ಯ್ಯೂ ಸುಸುಕಿ 2-0 ಅಂಕಗಳ ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯ 15 ಸೆಕೆಂಡ್‌ಗಳು ಬಾಕಿ ಇದ್ದಾಗ ತಮ್ಮ ಅನುಭವವನ್ನು ಚೆನ್ನಾಗಿಯೇ ಬಳಸಿಕೊಂಡ ವಿನೇಶ್, ಹಾಲಿ ಚಾಂಪಿಯನ್ ಆಟಗಾರ್ತಿಗೆ ಮೊದಲ ಸುತ್ತಿನಲ್ಲೇ ಶಾಕ್ ನೀಡುವಲ್ಲಿ ಯಶಸ್ವಿಯಾದರು.