ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕೋವಿಡ್ ಸಾಂಕ್ರಾಮಿಕಕ್ಕೂ ಮುಂಚೆ ಹಿರಿಯ ನಾಗರಿಕರಿಗೆ ರೈಲ್ವೆಯಿಂದ ನೀಡಲಾಗುತ್ತಿದ್ದ ಪ್ರಯಾಣ ದರ ರಿಯಾಯಿತಿಯನ್ನು ಪುನರಾರಂಭಿಸಲು ರೈಲ್ವೆ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ. ಇದು ದುರ್ಬಲ ಮತ್ತು ಅಗತ್ಯವಿರುವ ನಾಗರಿಕರಿಗೆ ಸಹಾಯ ಮಾಡಲಿದೆ ಎಂದು ಸಮಿತಿ ಹೇಳಿದೆ.
ಸಮಿತಿಯ ನೇತೃತ್ವ ವಹಿಸಿದ್ದ ಬಿಜೆಪಿ ಸಂಸದ ರಾಧಾ ಮೋನಹ್ ಅವರು ಎರಡೂ ಸದನಗಳಲ್ಲಿ ನಮ್ಮ ವರದಿಯನ್ನು ಸೋಮವಾರದಂದು ಮಂಡಿಸಿದರು.
60 ವರ್ಷ ಮೇಲ್ಪಟ್ಟ ಪುರುಷರಿಗೆ ಶೇ 40ರಷ್ಟು ಹಾಗೂ ಕನಿಷ್ಠ 58 ವಯೋಮಾನದ ಮಹಿಳೆಯರಿಗೆ ಶೇ 50ರಷ್ಟು ರಿಯಾಯಿತಿಯನ್ನು ರೈಲ್ವೆ ಇಲಾಖೆ ನೀಡುತ್ತಿತ್ತು. ಆದರೆ ಈ ರಿಯಾಯಿತಿಯನ್ನು 2020ರ ಮಾರ್ಚ್ 20ರಂದು ಹಿಂಪಡೆಯಲಾಗಿತ್ತು.
ಕೋವಿಡ್ ಬಳಿಕ ಈಗ ಮತ್ತೆ ರೈಲ್ವೇ ಆದಾಯ ಹೆಚ್ಚಾಗುತ್ತಿದ್ದು, ಮೊದಲಿನಂತೆ ರಿಯಾಯಿತಿ ನೀಡಲು ಶಿಫಾರಸು ಮಾಡಲಾಗಿದೆ.