Thursday, March 23, 2023

Latest Posts

ಆರ್‌ಆರ್‌ಆರ್‌ಗೆ ಆಸ್ಕರ್ ಬಂದಿದ್ದಕ್ಕೂ ಪ್ರಧಾನಿ ಮೋದಿಗೆ ಕ್ರೆಡಿಟ್ ಕೊಡಬಾರದು, ಖರ್ಗೆ ಹಾಸ್ಯಚಟಾಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸಿನಿಮಾಗಳು ಆಸ್ಕರ್‌ನಲ್ಲಿ ಸೈ ಎನಿಸಿಕೊಂಡಿದ್ದು, ಎಲ್ಲೆಡೆ ಆರ್‌ಆರ್‌ಆರ್ ಹಾಗೂ ಎಲಿಫೆಂಟ್ ವಿಸ್ಪರರ‍್ಸ್‌ಗೆ ಶುಭಾಶಯಗಳ ಸುರಿಮಳೆ ಹರಿಯುತ್ತಿದೆ. ಇದೀಗ ರಾಜ್ಯಸಭೆಯಲ್ಲೂ ಆಸ್ಕರ್ ಬಗ್ಗೆ ಚರ್ಚೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಇಡೀ ಸದನವೇ ನಗೆಗಡಲಿನಲ್ಲಿ ತೇಲಿದೆ.

ಭಾರತಕ್ಕೆ ಆಸ್ಕರ್‌ನಲ್ಲಿ ಎರಡು ಅವಾರ್ಡ್ ಸಿಕ್ಕಿದೆ, ಇದಕ್ಕೆ ನಮಗೆ ಹೆಮ್ಮೆಯಿದೆ. ಸಿನಿಮಾಗೆ ಅವಾರ್ಡ್ ಬಂದಿದ್ದಕ್ಕೆ ಆಡಳಿತ ಪಕ್ಷ ಕ್ರೆಡಿಟ್ ತಗೋಬಾರದು, ನಾವು ಕವಿತೆ ಬರೆದಿದ್ವಿ, ನಾವು ನಿರ್ಮಾಣ ಮಾಡಿದ್ವಿ ಎನ್ನಬಾರದು, ಪ್ರಧಾನಿ ಮೋದಿ ನಿರ್ದೇಶನ ಮಾಡಿದ್ದಕ್ಕೆ ಅವಾರ್ಡ್ ಬಂತು ಎಂದು ಹೇಳಬೇಡಿ ಎಂದು ನಕ್ಕಿದ್ದಾರೆ.

ಈ ಮಾತಿಗೆ ಇಡೀ ರಾಜ್ಯಸಭೆ ನಕ್ಕಿದೆ, ದೇಶದಲ್ಲಿ ಏನೇ ಒಳ್ಳೆಯದಾದ್ರೂ ಅದರ ಕ್ರೆಡಿಟ್‌ನ್ನು ಪ್ರಧಾನಿ ಮೋದಿ ಅವರಿಗೆ ಕೊಡುತ್ತಾರೆ ಎನ್ನುವ ಆರೋಪದ ಹಿನ್ನೆಲೆ ಖರ್ಗೆ ತಮಾಷೆ ಮಾಡಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!