ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೇರಾ ಸಚ್ಚಾ ಸೌಧದ ಮುಖ್ಯಸ್ಥ, ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್ ಗೆ 21 ದಿನಗಳ ಪೆರೋಲ್ ವಿಸ್ತರಣೆಗೆ ಹರಿಯಾಣ ಸರ್ಕಾರ ಅನುಮೋದನೆ ನೀಡಿದೆ.
ಗುರ್ಮಿತ್ ಪ್ರಸ್ತುತ ಎರಡು ಅತ್ಯಾಚಾರ ಪ್ರಕರಣ, ಎರಡು ವಿಭಿನ್ನ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾರೆ.
2017 ರಲ್ಲಿ ಗುರ್ಮೀತ್ ರಾಮ್ ರಹೀಮ್ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಈ ವರ್ಷ ಜುಲೈ 20 ರಂದು 30 ದಿನಗಳ ಕಾಲ ಗುರ್ಮೀತ್ ರಾಮ್ ರಹೀಮ್ ಗೆ ಕೊನೆಯ ಪೆರೋಲ್ ನೀಡಲಾಯಿತು. ಅತ್ಯಾಚಾರ ಮತ್ತು ಕೊಲೆ ಅಪರಾಧಿ ಆಗಸ್ಟ್ 15 ರಂದು ತನ್ನ ಜನ್ಮದಿನದಂದು ಪೆರೋಲ್‌ನಲ್ಲಿ ಹೊರಬಂದು ಮತ್ತು ಬಾಗ್ ಪತ್ ನ ಬರ್ವಾನಾದಲ್ಲಿರುವ ತನ್ನ ಆಶ್ರಮದಲ್ಲಿ ತಂಗಿದ್ದನು.
ಕಳೆದ 20 ತಿಂಗಳಲ್ಲಿ ಇದು ಆರನೇ ಬಾರಿ ಮತ್ತು ಒಂದು ವರ್ಷದೊಳಗೆ ನಾಲ್ಕನೇ ಬಾರಿ ರಾಮ್ ರಹೀಮ್‌ಗೆ ಪೆರೋಲ್ ನೀಡಲಾಗಿದೆ. ಇದಕ್ಕೂ ಮೊದಲು, ಹರಿಯಾಣ ಪಂಚಾಯತ್ ಚುನಾವಣೆ ಮತ್ತು ಆದಂಪುರ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಅವರನ್ನು ಅಕ್ಟೋಬರ್ 2022 ರಲ್ಲಿ 40 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು.