ಪ್ರಯಾಣಿಕರ ಸುರಕ್ಷತೆಗೆ ಹೊಸ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ: ಇನ್ನು 8 ಪ್ರಯಾಣಿಕರ ವಾಹನದಲ್ಲಿ 6 ಏರ್​ಬ್ಯಾಗ್ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಮೋಟಾರು ವಾಹನ ನಿಯಮದಲ್ಲಿ ಹಲವು ತಿದ್ದುಪಡಿಗಳನ್ನು ಮಾಡಲಾಗುತ್ತಿದ್ದು, ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇನ್ನು 8 ಪ್ರಯಾಣಿಕರನ್ನು ಸಾಗಿಸುವ ವಾಹನದಲ್ಲಿ ಕನಿಷ್ಠ 6 ಏರ್​ಬ್ಯಾಗ್ ಕಡ್ಡಾಯವಾಗಲಿದ್ದು, ಈ ಕುರಿತ ಕರಡು ಜಿಎಸ್​ಆರ್​ ಅಧಿಸೂಚನೆಗೆ ಗಡ್ಕರಿ ಅನುಮೋದನೆ ನೀಡಿದ್ದಾರೆ.
ಇನ್ನು ಹೊಸ ನಿಯಮದ ಪ್ರಕಾರ, ಇದೀಗ ಯಾವುದೇ ಮಾಡೆಲ್‌ಗಳ ಕಾರುಗಳಲ್ಲಿ ಆರು ಏರ್​ಬ್ಯಾಗ್ ಅಳವಡಿಸಲೇಬೇಕಿದೆ.
ಇಷ್ಟು ದಿನ ಡ್ರೈವರ್​ ಹಾಗೂ ಕೋ ಡ್ರೈವರ್​​ಗೆ ಎರಡು ಏರ್​ಬ್ಯಾಗ್​ ಕಡ್ಡಾಯಗೊಳಿಸಲಾಗಿತ್ತು. ಆದರೆ, ಇನ್ನು ಹಿಂಬದಿ ಪ್ರಯಾಣಿಕರ ಸುರಕ್ಷತೆಗೂ ಏರ್​ಬ್ಯಾಗ್ ಇರಲೇಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!