ತಾಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕ ವಿಮಾನ ಪತನ: 23 ಜನರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾನುವಾರ ತಾಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕ ವಿಮಾನವೊಂದು ಪತನಗೊಂಡಿದೆ. ಇದುವರೆಗೆ 23 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿನ ಘಟನೆಯ ವೀಡಿಯೊ ಮತ್ತು ಚಿತ್ರಗಳು ಆಫ್ರಿಕಾದ ಅತಿದೊಡ್ಡ ಸರೋವರವಾದ ವಿಕ್ಟೋರಿಯಾ ಸರೋವರದ ನೀರಿನ ರೇಖೆಯಲ್ಲಿ ವಿಮಾನವು ಬಹುತೇಕ ಮುಳುಗಿರುವುದನ್ನು ತೋರಿಸಿದೆ.

ಮ್ವಾಜ್ವಾನಿಂದ ಬುಕೋಬಾಗೆ ಪ್ರಯಾಣಿಸುತ್ತಿದ್ದ ವಿಮಾನವು 49 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಲಭ್ಯವಿರುವ ಅಧಿಕಾರಿಗಳು ಪ್ರಕಾರ ಇದುವರೆಗೆ 23 ಜನರನ್ನು ರಕ್ಷಿಸಲಾಗಿದೆ ಎಂದು BBC ನ್ಯೂಸ್ ಆಫ್ರಿಕಾ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!